ದಿನಭವಿಷ್ಯ| ಸಂತೋಷದ ಮಧ್ಯೆಯೂ ನೆಮ್ಮದಿ ಕೆಡಿಸುವ ಪ್ರಸಂಗ ಉಂಟಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಖಾಸಗಿ ಬದುಕಿನಲ್ಲಿ ಕೆಲವು ಬದಲಾವಣೆ ಸಂಭವ. ಕೆಲವು ಬದಲಾವಣೆಗಳು ಅದಕ್ಕೆ ಕಾರಣವಾಗುತ್ತವೆ. ಸಂಬಂಧ ಹಾಳಾಗಲು ಅವಕಾಶ ಕೊಡದಿರಿ.

ವೃಷಭ
ಆಪ್ತ ಬಂಧುಗಳ ಜತೆ ಕೂಡಿ ಕಳೆಯುವ ಅವಕಾಶ. ಸಂತೋಷದ ಮಧ್ಯೆಯೂ ನೆಮ್ಮದಿ ಕೆಡಿಸುವ ಪ್ರಸಂಗ ಉಂಟಾದೀತು. ಧೈರ್ಯ ಕಳಕೊಳ್ಳದಿರಿ.

ಮಿಥುನ
ಸಮಾನಮನಸ್ಕರ ಜತೆ ಬೆರೆಯುವ ಅವಕಾಶ. ವಿಚಾರವಿನಿಮಯ. ಕುಟುಂಬಸ್ಥರ ಸಂಗದಲ್ಲಿ ಖುಷಿಯೂ ಇದೆ, ಸಣ್ಣಪುಟ್ಟ ವೈಮನಸ್ಸೂ ಉಂಟಾದೀತು.

ಕಟಕ
ಪ್ರೀತಿಪಾತ್ರರ ಜತೆ ಕಾಲಕ್ಷೇಪ. ಸಣ್ಣ ವಿಷಯ ಮನಸ್ತಾಪಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ಕೆಲ ವಿಚಾರಗಳಲ್ಲಿ ಹೊಂದಾಣಿಕೆ ಮುಖ್ಯ.

ಸಿಂಹ
ದೊಡ್ಡ ಖರ್ಚಿಗೆ ಕೈಹಾಕಬೇಡಿ. ಅದನ್ನು ಮುಂದೂಡಿ. ಏಕೆಂದರೆ ಹಣದ ಕೊರತೆ ಎದುರಾದೀತು. ಕೌಟುಂಬಿಕ ಸಮಾಗಮ, ಸಹಕಾರ.

ಕನ್ಯಾ
ಅನಿರೀಕ್ಷಿತ ಸಮಸ್ಯೆ, ಹಿನ್ನಡೆ ಬಾಧಿಸುವುದು. ಇದರಿಂದ ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆ ಬಂದೀತು. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.

ತುಲಾ
ಈ ದಿನ ನಿಮಗೆ ಪೂರಕವಾಗಿದೆ. ಅದರ ಸಂಪೂರ್ಣ ಲಾಭ ಪಡೆಯಿರಿ. ಕಾರ್ಯದಲ್ಲಿ ಯಶಸ್ಸು. ಸಂಬಂಧದಲ್ಲಿ ಸುಧಾರಣೆ.

ವೃಶ್ಚಿಕ
ಮನೆಯಲ್ಲಿ ಭಿನ್ನಮತ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಇತರರ ಸಣ್ಣಪುಟ್ಟ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸಬೇಡಿ.

ಧನು
ಕೆಲದಿನಗಳಿಂದ ಕಾಡುತ್ತಿದ್ದ ಚಿಂತೆ, ಸಮಸ್ಯೆ ಪರಿಹಾರ ಕಾಣುವುದು. ಮನಸ್ಸಿಗೆ ನಿರಾಳತೆ ತರುವ ಬೆಳವಣಿಗೆ ಸಂಭವಿಸುವುದು.

ಮಕರ
ಯಾವುದೋ ವಿಷಯ ಲ್ಲಿ ಹತಾಶೆ. ಇನ್ನೇನೂ ಆಗದು ಎಂಬ ನಿರಾಶಾಭಾವ .ಆದರೆ ತಾಳಿ, ಇಂದು ನಿಮಗೆ ಪೂರಕದ ಬೆಳವಣಿಗೆ ಸಂಭವಿಸುವುದು.

ಕುಂಭ
ಇತರರ ಪ್ರೀತಿ, ಮಮಕಾರವನ್ನು ಅನುಭವಿಸುವಿರಿ. ನಿಮ್ಮ ಬಗ್ಗೆ ಎಲ್ಲರೂ ಕಾಳಜಿ ವಹಿಸುವರು. ಇದರಿಂದ ಮನಸ್ಸಿಗೆ ನೆಮ್ಮದಿ. ಉಲ್ಲಾಸ.

ಮೀನ
ಅದೃಷ್ಟ ಇಂದು ನಿಮ್ಮ ಜತೆಗಿದೆ. ಯಾವುದೇ ಕಾರ್ಯದಲ್ಲೂ ಸಫಲತೆ ಸಿಗುವುದು. ದೂರದ ಬಂಧು ಶುಭ ಸುದ್ದಿ ನೀಡುವರು. ಆರ್ಥಿಕ ಸುಧಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!