ಹೊಸದಿಗಂತ ಡಿಜಿಟಲ್ ಡೆಸ್ಕ್:
ಊಟದ ಬಳಿಕ ಚಪಾತಿ ಅಥವಾ ರೋಟಿ ಉಳಿದು ಹೋದರೆ ಅದನ್ನು ಬೆಳಗ್ಗೆ ಬಿಸಿ ಮಾಡಿ ತಿನ್ನುವು, ಅಥವಾ ಬಿಸಾಡುವುದು ಸಾಮಾನ್ಯ. ಆದರೆ, ಉಳಿದ ಚಪಾತಿ, ರೋಟಿಗಳಿಂದ ಸಂಜೆಗೆ ಟೇಸ್ಟಿ ಸ್ನಾಕ್ಸ್ ಮಾಡಿ ನೋಡಿ ಬಾಯಿ ಚಪ್ಪರಿಸಿ ತಿಂತೀರಿ.
ಬೇಕಾಗುವ ಸಾಮಾಗ್ರಿ
4 ರಿಂದ 5 ಚಪಾತಿ, ರೋಟಿ
ಬೇಯಿಸಿದ ಆಲೂಗೆಡ್ಡೆ
2 ಟೊಮ್ಯಾಟೊ (ಸಣ್ಣದಾಗಿ ಹೆಚ್ಚಿ)
2 ಸಣ್ಣದಾಗಿ ಹೆಚ್ಚಿದ ಈರುಳ್ಳಿ
1 ಕಪ್ ಮೊಸರು
2 ಹಸಿರು ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು 1 ಚಮಚ
ನಿಂಬೆ ರಸ ಅಥವಾ ಹುಣಸೆ ರಸ
1 ಟೀಸ್ಪೂನ್ ಹುರಿದ ಜೀರಿಗೆ ಪುಡಿ
ಮೆಣಸಿನ ಪುಡಿ, ಚಾಟ್ ಮಸಾಲಾ
ಎಣ್ಣೆ
ಉಪ್ಪು
ದಾಳಿಂಬೆ ಹಣ್ಣು
ಮಾಡುವ ವಿಧಾನ
ಮೊದಲು ಚಪಾತಿ ಅಥವಾ ರೋಟಿಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ ಪಕ್ಕಕ್ಕಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಚಪಾತಿ ತುಂಡುಗಳನ್ನು ಚೆನ್ನಾಗಿ ಫ್ರೈ ಮಾಡಿ. ಗೋಲ್ಡನ್ ಬಣ್ಣದಲ್ಲಿ ಬಂದ ಕೂಡಲೇ ತೆಗೆದು ಬಿಡಿ.
ಇನ್ನೊಂದು ಪಾತ್ರೆಯಲ್ಲಿ ಚಾಟ್ ಮಸಾಲಾ, ಮೆಣಸಿನ ಪುಡಿ, ಹೆಚ್ಚಿದ ಮೆಣಸಿನಕಾಯಿ ತುಂಡು, ಬೇಯಿಸಿದ ಆಲೂಗಡ್ಡೆ ಸ್ಮಾಶ್ ಮಾಡಿ ಹಾಕಿ. ಜೊತೆಗೆ ಟೊಮೆಟೊ, ಈರುಳ್ಳಿ, ಮತ್ತು ಜೀರಿಗೆ ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಫ್ರೈ ಮಾಡಿ ಚಪಾತಿ ಪೀಸ್‌ಗಳನ್ನು ಹಾಕಿ, ನಿಂಬೆ ರಸ ಅಥವಾ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ದಾಳಿಂಬೆ ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸರ್ವ್ ಮಾಡಿ. ಸಂಜೆ ಕಾಫಿ ಟೀ ಜೊತೆಗೆ ರುಚಿಯಾದ ಸ್ನಾಕ್ಸ್ ರೆಡಿ.