ಶ್ರದ್ಧಾ ದೇಹದ ಭಾಗಗಳು ಫ್ರಿಜ್ ನಲ್ಲಿಟ್ಟಿದ್ದ ಮನೆಯಲ್ಲೇ ವೈದ್ಯೆ ಜೊತೆಗೆ ಡೇಟಿಂಗ್‌ ಮಾಡುತ್ತಿದ್ದ ಅಫ್ತಾಬ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಂಗಾತಿ ಶ್ರದ್ಧಾ ವಾಕರ್ ಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಪ್ರಜ್‌ ನಲ್ಲಿ ಇರಿಸಿದ್ದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಬಳಿಕ ಮತ್ತೊಬ್ಬ ಯುವತಿಯನ್ನು ತನ್ನ ಮನೆಗೆ ಕರೆತಂದಿದ್ದ.  ಮೆಹ್ರೌಲಿ ನಿವಾಸಕ್ಕೆ ಭೇಟಿ ನೀಡಿದ ಮಹಿಳೆಯನ್ನು ಇದೀಗ ಎಲ್ಹಿ ಪೊಲೀಸರು ಗುರುತಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಮೊಬೈಲ್ ಡೇಟಿಂಗ್ ಅಪ್ಲಿಕೇಶನ್ ‘ಬಂಬಲ್’ ಮೂಲಕ ಅವರಿಬ್ಬರು ಪರಿಚಯವಾಗಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ವೃತ್ತಿಯಲ್ಲಿ ಮನಶ್ಶಾಸ್ತ್ರಜ್ಞರಾಗಿರುವ ಮಹಿಳೆಯನ್ನು ಆಫ್ತಾಬ್ ತನ್ನ ಮನೆಗೆ ಆಹ್ವಾನಿಸಿದಾಗ ಶ್ರದ್ಧಾ ಅವರ ದೇಹದ ತುಂಡುಗಳನ್ನು ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿತ್ತು. ಇದೀಗ ಆ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕವೇ ಪೂನಾವಾಲಾ ಹಲವು ಮಹಿಳೆಯರನ್ನು ಭೇಟಿಯಾಗಿದ್ದ ಎನ್ನಲಾಗಿದೆ.ಈ ಹಿಂದೆ ಪುನಾವಾಲ ಶ್ರದ್ಧಾಳನ್ನು ‘ಬಂಬಲ್’ಗೆ ಆಪ್ ನಲ್ಲೇ ಭೇಟಿಯಾಗಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!