Monday, January 30, 2023

Latest Posts

‘ಪೊಲೀಸರಿಗೆ ಹೆದರಬೇಡಿ, ಬೇಕಾದರೆ ಅವರ ಮೇಲೆ ಬಾಂಬ್ ಹಾಕಿʼ: ಕಾಂಗ್ರೆಸ್ ನಾಯಕಿ ಕಾರ್ಯಕರ್ತರಿಗೆ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಶ್ಚಿಮ ಬಂಗಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಬ್ರತಾ ದತ್ತಾ ಅವರು ಬಿರ್‌ಭೂಮ್‌ನಲ್ಲಿ ನಡೆದ ಸಭೆಯಲ್ಲಿ ಪೊಲೀಸರ ವಿರುದ್ಧ ವೀವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಜಕೀಯ ವಿವಾದಕ್ಕೆ ಸಿಲುಕಿದ್ದಾರೆ. ‘ಪೊಲೀಸರಿಗೆ ಹೆದರಬೇಡಿ, ಬಾಂಬ್ ಬೇಕಾದರೆ ಅವರ ದೇಹವನ್ನು ಗುಂಡುಗಳಿಂದ ರಂಧ್ರ ಮಾಡಿ’ ಎಂದು ದತ್ತ ಪ್ರಚೋದನಾಕಾರಿಯಾಗಿ ಮಾತನಾಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
ತೃಣಮೂಲ ನಾಯಕ ಅಭಿಷೇಕ್ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ಕಾಂಗ್ರೆಸ್‌ ನಾಯಕಿ ವಾಗ್ದಾಳಿ ನಡೆಸಿದ್ದಾರೆ. ಕೆಲದಿನ ಗಳ ಹಿಂದೆ ಅಭಿಷೇಕ್‌ ಪ್ರತಿಭಟನೆ ವೇಳೆ ಯಾರು ಪೊಲೀಸ್‌ ವಾಹನಕ್ಕೆ ಬೆಂಕಿ ಇಡುವುದು, ಧ್ವಂಸ ಮಾಡುವುದು ಮಾಡುತ್ತಾರೋ ಅವರ ತಲೆಗೆ ಗುಂಡು ಹೊಡೆಯಬೇಕು ಎಂದು ಹೇಳಿದ್ದರು. ಈ ಬಗ್ಗೆ ಆಕ್ರೋಶಭರಿತರಾಗಿ ಮಾತನಾಡಿದ ಕಾಂಗ್ರೆಸ್‌ ನಾಯಕಿ “ಅವರು ಹಣೆಯ ಮೇಲೆ ಗುಂಡು ಹಾರಿಸುವ ಬಗ್ಗೆ ಮಾತನಾಡಬಹುದಾದರೆ, ನಾನು ಇಡೀ ಪೊಲೀಸರ ದೇಹಕ್ಕೆ ಗುಂಡು ಹಾರಿಸಲು ಕರೆನೀಡುತ್ತೇನೆ ಮತ್ತು ಅವರ ದೇಹವನ್ನು ಗುಂಡುಗಳಿಂದ ರಂಧ್ರ ಮಾಡಿ ಎಂದು ಹೇಳುತ್ತೇನೆ” ಎಂದು ಹೇಳಿದ್ದಾರೆ.
ಹಿರಿಯ ತೃಣಮೂಲ ಸಚಿವ ಫಿರ್ಹಾದ್ ಹಕೀಮ್ ಅವರು ಕಾಂಗ್ರೆಸ್ ನಾಯಕಿಯ ಹೇಳಿಕೆಗಳನ್ನು ಖಂಡಿಸಿದ್ದಾರೆ. ಮತ್ತು ಇದು ಸ್ಪಷ್ಟ ಪ್ರಚೋದನೆಯಾಗಿದೆ ಎಂದು ಹೇಳಿದ್ದಾರೆ. ಕೂಡಲೇ ದೂರು ದಾಖಲಿಸಿ ತನಿಖೆ ಆರಂಭಿಸುವಂತೆ ಪೊಲೀಸರಿಗೆ ಹೇಳುತ್ತೇನೆ ಎಂದು ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಜಕಾರಣಿಗಳಿಂದ ಪೊಲೀಸರ ಮೇಲೆ ಮಾತಿನ ದಾಳಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮೊಂಡಲ್‌ ತಮ್ಮ ಚುನಾವಣಾ ಪ್ರಚಾರದ ವೇಳೆ, “ಯಾರಾದರೂ ಸ್ವತಂತ್ರ ಅಭ್ಯರ್ಥಿಯಾಗಲು ಬಯಸಿದರೆ ಅವರ ಮನೆಗೆ ಹೋಗಿ, ಅವರನ್ನು ರಕ್ಷಿಸಲು ಪೊಲೀಸರು ಬಂದರೆ ಬಾಂಬ್ ಸ್ಫೋಟಿಸಿ” ಎಂದು ಕರೆನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!