ದೆಹಲಿ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಆಮ್ ಆದ್ಮಿ: ಉತ್ತಮ ಆಡಳಿತಕ್ಕೆ ಪ್ರಧಾನಿ ಮೋದಿಯ ಆಶೀರ್ವಾದ ಕೋರಿದ ಕ್ರೇಜಿವಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವಿನ ನಗೆ ಬೀರಿದ್ದು, ಈ ಮೂಲಕ 15 ವರ್ಷಗಳ ಬಳಿಕ ನೂತನ ಪಕ್ಷ ಗದ್ದುಗೆ ಏರಿದೆ.

ಇನ್ನು ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ , ಪಾಲಿಕೆಯಲ್ಲಿ ಉತ್ತಮ ಆಡಳಿತ ನಡೆಸಲು ಕೇಂದ್ರ ಮತ್ತು ಪ್ರಧಾನಿ ಮೋದಿರುವರ ಆಶೀರ್ವಾದ ಕೋರಿದ್ದಾರೆ.

ದೆಹಲಿ ಪಾಲಿಕೆಯಲ್ಲಿ ಕೆಲಸ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ ಸಹಕಾರವನ್ನು ನಾನು ಬಯಸುತ್ತೇನೆ. ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ. ದೆಹಲಿಯನ್ನು ಉತ್ತಮಗೊಳಿಸಲು ಪ್ರಧಾನಿಯವರ ಆಶೀರ್ವಾದವನ್ನು ಕೇಳುತ್ತೇನೆ. ಎಂಸಿಡಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಇಂದು ದೆಹಲಿಯ ಜನರು ಇಡೀ ದೇಶಕ್ಕೆ ಸಂದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿಯ 250 ಸ್ಥಾನಗಳ ಮಹಾನಗರ ಪಾಲಿಕೆ (ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ) ಚುನಾವಣೆಯಲ್ಲಿ ಎಎಪಿ 134 ವಾರ್ಡ್‌ಗಳನ್ನು ಗೆದ್ದುಕೊಂಡರೆ, ಬಿಜೆಪಿ ಕೇವಲ 104 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಕೇವಲ 9 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!