ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ನಟರ ಮಕ್ಕಳ ಬಗ್ಗೆ ನೆಟ್ಟಿಗರು ಒಂದು ಕಣ್ಣಿಟ್ಟಿರುತ್ತಾರೆ. ಅವರ ಸ್ಟೋರಿ, ಬಟ್ಟೆ, ಟ್ರೆಂಡಿಂಗ್ ಬಟ್ಟೆಗಳ ಬಗ್ಗೆ ಗಮನ ಹರಿಸಿರುತ್ತಾರೆ.
ಈಗ ನೆಟ್ಟಿಗರ ಕಣ್ಣು ಆಮೀರ್ ಖಾನ್ ಮಗಳು ಇರಾ ಖಾನ್ ಮೇಲೆ ಬಿದ್ದಿದೆ. ಕಳೆದ ಕೆಲವು ವರ್ಷಗಳಲ್ಲಿ ಆದ ಬೇಸರದ ಅನುಭವಗಳಿಂದ 20 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ ಅವರು, ತಮ್ಮ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ನಾನು ಇದನ್ನು ತಿನ್ನೋಕೆ ಆಗಲ್ಲ, ಆದರೆ ಅದರ ಮುಂದೆ ಫೋಟೋಕ್ಕೆ ಪೋಸ್ ನೀಡಲಾಗದು ಎಂದರ್ಥವಲ್ಲ” ಎಂದಿದ್ದಾರೆ.
ತೂಕ ಕಳೆದುಕೊಳ್ಳಬೇಕು ಎಂದು ನಾನು ಆರಂಭವಾಗಿ ಇತ್ತೀಚೆಗೆ 15 ದಿನ ಉಪವಾಸ ಮಾಡಿದೆ. ನಾನು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿಲ್ಲ ಎಂದು ಗೊತ್ತಿದೆ. ಇಷ್ಟು ವರ್ಷಗಳಲ್ಲಿ ನಾನು ತುಂಬ ಆಕ್ಟಿವ್ ಆಗಿದ್ದೇ ಹೆಚ್ಚು, ಆದರೆ ಕಳೆದ 4-5 ವರ್ಷಗಳಿಂದ ನಾನು ಏನೂ ಮಾಡಿಲ್ಲ. ಹೀಗಾಗಿ 20 ಕೆಜಿ ತೂಕ ಹೆಚ್ಚಾಯ್ತು. ಇದೆ ನನಗೆ ತಲೆನೋವಾಗಿದೆ” ಎಂದಿದ್ದಾರೆ ಇರಾ ಖಾನ್.