ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ಲಿ ಕ್ಯಾಪಿಟಲ್ಸ್ ಐಪಿ ಎಲ್ 2022ರ ಪಂದ್ಯಾವಳಿಗೆ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಂಡಿಲ್ಲ. ಆದರೆ ಈಗ ಅವರಿಗೆ ಬೇರೆ ತಂಡಗಳಿಂದ ಆಹ್ವಾನ ಕೇಳಿಬರುತ್ತಿದೆ.
ಈಗಾಗಲೇ ಕೊಲ್ಕತ್ತಾ ನೈಟ್ ರೈಡರ್ಸ್ ಶ್ರೇಯಸ್ ಅಯ್ಯರ್ ರನ್ನು ತಂಡದ ಸಂಭಾವ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಹಿಂದೆ ಶ್ರೇಯಸ್ ಅಹಮದಾಬಾದ್ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿತ್ತು.
ಕಳೆದ ಸೀಸನ್ ನಲ್ಲಿದ್ದ ಕೆಕೆಆರ್ ನ ಇಯಾನ್ ಮಾರ್ಗನ್ ರನ್ನು ಫ್ರಾಂಚೈಸಿ ಉಳಿಸಿಕೊಂಡಿಲ್ಲ. ಹಾಗಾಗಿ ಶ್ರೇಯಸ್ ಈಗ ಕೆಕೆಆರ್ ನ ಕ್ಯಾಪ್ಟನ್ ಆಗುವ ಎಲ್ಲಾ ಸಾದ್ಯತೆ ಇದೆ ಎನ್ನಲಾಗುತ್ತಿದೆ. ಕೆಕೆಆರ್ ನಾಯಕತ್ವದ ಬದಲಾವಣೆ ಬಗ್ಗೆ ಈಗಾಗಲೇ ತಂಡದ ಪ್ರತಿನಿಧಗಳು ಶ್ರೇಯಸ್ ಜತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.