ಆಪ್’ ಸಾರಾಯಿ ಹಗರಣ’- ಬಿಜೆಪಿಯಿಂದ ಮತ್ತೊಂದು ಕುಟುಕು ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಪ್‌ ಸರ್ಕಾರದ ಬಹುಚರ್ಚಿತ ʼಸಾರಾಯಿ ಹಗರಣʼಕ್ಕೆ ಸಂಬಂಧಿಸಿದಂತೆ ಬಿಜೆಪಿ ಈಗ ಮತ್ತೊಮ್ಮೆ ಆಪ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ತನ್ನ ಕುಟುಕು ಕಾರ್ಯಾಚರಣೆಯ (ಸ್ಟಿಂಗ್‌ ಆಪರೇಷನ್)‌ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹಗರಣದಲ್ಲಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಆಪ್‌ ಸರ್ಕಾರ ದೊಡ್ಡ ದೊಡ್ಡ ವ್ಯಾಪಾರಿಗಳು, ವ್ಯವಹಾರಸ್ಥರಿಂದ ಕಿಕ್‌ ಬ್ಯಾಕ್‌ ಪಡೆದುಕೊಂಡಿದೆ ಎಂದು ಅದು ಆರೋಪಿಸಿದೆ.

ಬಿಜೆಪಿಯ ಸುಧಾಂಶು ತ್ರಿವೇದಿ ಮತ್ತು ಆದೀಶ್‌ ಗುಪ್ತಾ ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಕುಟುಕು ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ. ಹೊಸ ಸಾರಾಯಿ ನೀತಿಯಡಿಯಲ್ಲಿ ಟೆಂಡರ್‌ ಪಡೆಯಲು ಪ್ರತಿ ಕಂಪನಿಯಿಂದ 5 ಕೋಟಿ ರೂ. ಬೇಡಿಕೆಯನ್ನು ಆಪ್‌ ಸರ್ಕಾರ ಇಟ್ಟಿದೆ. ಇದು ಪ್ರಮುಖ ಕಂಪನಿಗಳ ಪ್ರವೇಶಕ್ಕೆ ಮಾತ್ರ ಅನುವು ಮಾಡಿಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಡೀಲ್‌ ನಿಂದ ಆಮ್‌ ಆದ್ಮಿ ಪಕ್ಷವು ಸರಿಸುಮಾರು 100 ಕೋಟಿ ರೂ ಗಳಷ್ಟನ್ನು ಬಾಚಿಕೊಂಡಿದೆ. ಈ ಹಣವನ್ನು ಪಂಜಾಬ್‌ ಮತ್ತು ಗೋವಾಗಳಲ್ಲಿ ಚುನಾವಣೆಗೆ ಫಂಡಿಂಗ್‌ ಮಾಡಲು ಬಳಸಿಕೊಳ್ಳಲಾಗಿದೆ. ಈ ಮೊದಲು ಸಾರಾಯಿ ಪೂರೈಕೆದಾರರು ಮತ್ತು ವಿತರಕರು 5 ಪರ್ಸೆಂಟ್‌ ಕಮಿಷನ್‌ ನೀಡಬೇಕಿತ್ತು. ಆದರೆ ಇದನ್ನು ಏಕಾಏಕಿ 12 ಪರ್ಸೆಂಟ್‌ ಗೆ ಏರಿಕೆ ಮಾಡಲಾಯಿತು. ಇದೇ ರೀತಿ ಪಂಜಾಬ್‌ ನಲ್ಲೂ ಮಾಡಲಾಗಿದ್ದು ಅಲ್ಲಿ 10 ಪರ್ಸೆಂಟ್‌ ಕಮಿಷನ್‌ ನಿಗದಿ ಪಡಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!