ಬೇಗುಸರಾಯ್‌ ಶೂಟೌಟ್‌: ಹಂತಕರ ಫೋಟೋ ಬಿಡುಗಡೆಗೊಳಿಸಿದ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದ ರಾಜಧಾನಿ ಬೇಗುಸರಾಯ್‌ನಲ್ಲಿ ಶೂಟೌಟ್‌ ನಡೆಸಿ, ಓರ್ವ ಯುವಕನ ಸಾವಿಗೆ ಕಾರಣರಾದ ಇಬ್ಬರು ದುಷ್ಕರ್ಮಿಗಳ ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಆಧರಿಸಿ ತೆಗೆದ ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅವರ ಪತ್ತೆಯನ್ನು ಬಹಿರಂಗಪಡಿಸುವವರಿಗೆ 50,000 ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಬೇಗುಸರಾಯ್‌ನಲ್ಲಿ ಮಂಗಳವಾರ ಬಂದೂಕು ಹಿಡಿದು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಂಡ ಕಂಡವರಿಗೆ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಚಂದನ್ ಕುಮಾರ್ ಎಂಬ ಯುವಕ ಸಾವನ್ನಪ್ಪಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅವಘಡದಿಂದ ಇನ್ನೂ 10 ಮಂದಿ ಪಾರಾಗಿದ್ದಾರೆ. ದಾಳಿಕೋರರು ಸುಮಾರು 8 ಕಿಲೋಮೀಟರ್ ವರೆಗೂ ಗುಂಡು ಹಾರಿಸಿಕೊಂಡು ಹೋಗಿದ್ದಾರೆ. ಎರಡು/ಮೂರು ಚೆಕ್ ಪೋಸ್ಟ್  ದಾಟಿದರೂ ಯಾರೂ ಅವರನ್ನು ಹಿಡಿದಿಲ್ಲ. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಏಳು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಹತ್ತಿರದ ನಾಲ್ಕು ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದಷ್ಟು ಬೇಗ ಇಬ್ಬರು ಆರೋಪಿಗಳನ್ನು ಬಂಧಿಸುವುದಾಗಿ ಬೇಗುಸರಾಯ್ ಜಿಲ್ಲಾ ಎಸ್ಪಿ ಯೋಗೇಂದ್ರ ಕುಮಾರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!