ಗುಜರಾತ್‌ ಫಲಿತಾಂಶದಿಂದ ಆಮ್‌ ಆದ್ಮಿಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ: ಮನೀಶ್ ಸಿಸೋಡಿಯಾ ಹರ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗುಜರಾತಿಗಳ ಮತಗಳು ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಮಾಡಲಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ʼಇದೇ ಮೊದಲ ಬಾರಿಗೆ, ಶಿಕ್ಷಣ ಮತ್ತು ಆರೋಗ್ಯ ವಿಷಯಗಳನ್ನು ಆಧಿರಿಸಿದ ರಾಜಕೀಯ ಪಕ್ಷವೊಂದು ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸುತ್ತಿದೆ. ಇದಕ್ಕಾಗಿ ಇಡೀ ದೇಶಕ್ಕೆ ಅಭಿನಂದನೆಗಳುʼ ಎಂಉದ ಅವರು ಹೇಳಿದ್ದಾರೆ.
ಈಗಾಗಲೇ ದೆಹಲಿ, ಪಂಜಾಬ್ ಮತ್ತು ಗೋವಾದಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿಕೊಂಡಿರುವ ಎಎಪಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಗಳಿಸಲು ಕೇವಲ ಒಂದು ರಾಜ್ಯದ ಅಗತ್ಯವಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಗಳಿಸಲು, ಒಂದು ರಾಜಕೀಯ ಪಕ್ಷವು ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಗುರುತಿಸಲ್ಪಡಬೇಕು ಮತ್ತು ರಾಜ್ಯ ಪಕ್ಷವಾಗಿ ಗುರುತಿಸಲ್ಪಡಬೇಕಾದರೆ, ಅದು ಕನಿಷ್ಟ ಎರಡು ಸ್ಥಾನಗಳನ್ನು ಮತ್ತು ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 6 ರಷ್ಟು ಮತಗಳನ್ನು ಗೆಲ್ಲುವ ಅಗತ್ಯವಿದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಗುಜರಾತ್‌ ಚುನಾವಣೆ ಮತ ಎಣಿಕೆಯಲ್ಲಿ ಎಎಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದು ಶೇಕಡಾ 6 ರಷ್ಟು ಮತಗಳನ್ನು ಗಳಿಸಿದರೆ ಅದು ರಾಷ್ಟ್ರೀಯ ಪಕ್ಷದ ಸ್ಥಾನಕ್ಕೆ ಏರಲಿದೆ. ರಾಷ್ಟ್ರೀಯ ಪಕ್ಷದ ಟ್ಯಾಗ್ ಎಎಪಿಯ ರಾಷ್ಟ್ರೀಯ ಮಹತ್ವಾಕಾಂಕ್ಷೆಗೆ ಉತ್ತೇಜನಕಾರಿಯಾಗಲಿದೆ. ಗುಜರಾತ್‌ ನಲ್ಲಿ ಆಮ್‌ ಆದ್ಮಿ ಎರಡಂಕಿ ಸ್ಥಾನ ಗಳಿಸುವುದು ಕಷ್ಟವೆಂದು ಸಮೀಕ್ಷೆಗಳು ಹೇಳಿದ್ದರೂ ಸಹ, ಆಪ್‌ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!