ಹಿಮಾಚಲ ಪ್ರದೇಶ ರಿಸಲ್ಟ್: ಬಿಜೆಪಿಗೆ ಎರಡು ಸ್ಥಾನದಲ್ಲಿ ಗೆಲುವು, ಸಿಎಂ ಠಾಕೂರ್ ಜಯಭೇರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ತೀವ್ರ ಪೈಪೋಟಿ ನಡುವೆಯೂ ಬಿಜೆಪಿ ಎರಡು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಸೆರಾಜ್ ಕ್ಷೇತ್ರದಿಂದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಗೆಲುವು ಸಾಧಿಸಿದ್ದಾರೆ.

ಮಂಡಿ ಜಿಲ್ಲೆಯ ಸುಂದರನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಕೇಶ್ ಜಮ್ವಾಲ್ ಗೆಲುವು ಪಡೆದಿದ್ದಾರೆ.
ಸೆರಾಜ್ ಮತ್ತು ಸುಂದರ ನಗರ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಹಿಮಾಚಲ ಪ್ರದೇಶದಲ್ಲಿ 38  ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ. ಬಿಜೆಪಿ 27  ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಇನ್ನೂ ಹಲವು ಹಂತಗಳ ಮತ ಎಣಿಕೆ ಬಾಕಿ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!