ಬ್ರೈಡಲ್ ಪಾರ್ಟಿ ಸಂಭ್ರಮದಲ್ಲಿ ಆಶಿಕಾ ರಂಗನಾಥ್ ಸಹೋದರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಡ್ ನ ಬೆಡಗಿ ಆಶಿಕಾ ರಂಗನಾಥ್ ಅವರ ಸಹೋದರಿ ಅನುಷಾ ವಿವಾಹವಾಗಲಿದ್ದಾರೆ. ಇದೇ ಖುಷಿಯಲ್ಲಿ ಸಹೋದರಿ, ತಂಗಿ ಆಶಿಕಾ ಜೊತೆ ಬ್ರೈಡಲ್ ಪಾರ್ಟಿ ಮಾಡಿದ್ದಾರೆ. ಇದರ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಗೋಕುಲದಲ್ಲಿ ಸೀತೆ’ ಎಂಬ ಧಾರಾವಾಹಿ ಸೇರಿದಂತೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅನುಷಾ ರಂಗನಾಥ್ ಮದುವೆಗೆ ಸಜ್ಜಾಗುತ್ತಿದ್ದಾರೆ. ಖಾಸಗಿ ರೆಸಾರ್ಟ್‌ನಲ್ಲಿ ಅನುಷಾ ಮತ್ತು ಅವರ ತಂಡ ಬ್ರೈಡಲ್ ಪಾರ್ಟಿ ಮಾಡುವ ಮೂಲಕ ಸಂಭ್ರಮಿಸಿತು.

ಮದುವೆಯ ಹುಡುಗಿ ಅನುಷಾ ತನ್ನ ಸಹೋದರಿ ಆಶಿಕಾ ರಂಗನಾಥ್, ಸಿರಿ ಪ್ರಹ್ಲಾದ್, ಸುಶ್ಮಿತಾ ಗೌಡ ಮತ್ತು ಆಪ್ತರೊಂದಿಗೆ ಬ್ರೈಡಲ್ ಪಾರ್ಟಿಯನ್ನು ಆಚರಿಸಿದರು. ಇನ್ನೂ ಖುಷಿಯಿಂದ ತಂಗಿ ಆಶಿಕಾರನ್ನು ಎತ್ತಿಕೊಂಡು ಅನುಷಾ ಖುಷಿಯಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಈ ಬ್ರೈಡಲ್ ಪಾರ್ಟಿಯಲ್ಲಿ, ಕೇಕ್ ಮೇಲೆ ಬ್ರೈಡ್ ಎಂದು ಬರೆಯಲಾಗಿದೆ. ಆದರೆ ಮದುವೆ ಯಾವಾಗ? ಹುಡುಗ ಯಾರು ಎಂಬುದು ರಿವೀಲ್ ಆಗಿಲ್ಲ. ಈ ಸುದ್ದಿಯಿಂದ ಅಭಿಮಾನಿಗಳು ನಟಿಗೆ ಶುಭಕೋರುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!