ಆಸ್ತಿ-ಅಂತಸ್ತು ತ್ಯಜಿಸಿ ರಸ್ತೆ-ವಿದ್ಯುತ್​​ ಇಲ್ಲದ ಊರಿನಲ್ಲಿ ಜೀವನ: ಇದು ಐಐಟಿ ಪ್ರೋಫೆಸರ್​ ಕಥೆ ಎಂದ ಮಾಜಿ ಕ್ರಿಕೆಟಿಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಸರಾಂತ ಐಐಟಿ ಪ್ರೋಫೆಸರ್​ ಇಂದು ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡಿಕೊಂಡು, ತಮ್ಮೆಲ್ಲಾ ಆಸ್ತಿ-ಅಂತಸ್ತು ತ್ಯಜಿಸಿ, ರಸ್ತೆ-ವಿದ್ಯುತ್​​ ಇಲ್ಲದ ಊರಿನಲ್ಲಿ ಜೀವನ ಮಾಡುತ್ತಿದ್ದಾರೆ.

ಹೌದು. ಮಾಜಿ ಆರ್​ಬಿಐ ಗವರ್ನರ್​ ಆಗಿದ್ದ ರಘುರಾಮ್ ರಾಜನ್ ಅವರಿಗೆ ಪಾಠ ಹೇಳಿಕೊಟ್ಟ ಐಐಟಿ ಪ್ರೋಫೆಸರ್ ಅಲೋಕ್ ಸಾಗರ್ ಅವರು ತಮ್ಮ ಜೀವನವನ್ನು ಬುಡಕಟ್ಟು ಜನಗಳಿಗೆಂದೇ ಮಿಸಲಿದ್ದಾರೆ .

ಈ ಕುರಿತು ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್​ ಲಕ್ಷಣ್​ ಮಾಹಿತಿ ಹಂಚಿಕೊಂಡಿದ್ದಾರೆ.

ಐಐಟಿ ದೆಹಲಿಯ ಮಾಜಿ ಪ್ರಾಧ್ಯಾಪಕರಾದ ಅಲೋಕ್ ಸಾಗರ್ 1982ರಲ್ಲಿ ಉತ್ತಮ ಆದಾಯವನ್ನು ತಂದುಕೊಡುತ್ತಿದ್ದ ಕೆಲಸವನ್ನು ತೊರೆದು ಆದಿವಾಸಿಗಳ ಬದುಕು ರೂಪಿಸಲು, ಮಹಿಳೆಯರ ಉನ್ನತಿಗಾಗಿ ಕೆಲಸ ಮಾಡಲು ಮತ್ತು ಪ್ರಕೃತಿಯೊಂದಿಗೆ ಸಂಪರ್ಕದಲ್ಲಿರಲು ನಿರ್ಧರಿಸಿ ಬೇರೆ ರೀತಿಯ ಜೀವನ ಶೈಲಿಯಲ್ಲಿ ಜೀವಿಸುತ್ತಿದ್ದಾರೆ. ಇಂದು ಅನೇಕರಿಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಐಐಟಿ ದೆಹಲಿಯಿಂದ ಪದವೀಧರರಾದ ಇವರು, ಸ್ನಾತಕೋತ್ತರ ಪದವಿಗಳ ಜತೆಗೆ, ಅಮೆರಿಕಾದ ಟೆಕ್ಸಾಸ್‌ನಲ್ಲಿರುವ ಹೂಸ್ಟನ್ ವಿಶ್ವವಿದ್ಯಾಲಯದಿಂದ ಪಿ.ಎಚ್​ಡಿ ಹೊಂದಿದ್ದಾರೆ. ವಿಶೇಷ ಎಂದರೆ ಆರ್‌ಬಿಐನ ಮಾಜಿ ಗವರ್ನರ್ ಆದ ರಘುರಾಮ್ ರಾಜನ್ ಅವರಿಗೂ ಇವರು ಪಾಠ ಹೇಳಿಕೊಟ್ಟಿದ್ದಾರೆ. ಈಗ ಇವರಿಗೆ ಈ ಎಲ್ಲಾ ಪದವಿಗಳು ಅರ್ಥಹೀನವಾಗಿವೆ. ಇದ್ಯಾವುದು ಅವರಿಗೆ ತೃಪ್ತಿ ನೀಡಿಲ್ಲ. ಹೀಗಾಗಿ ಬದುಕಿನ ದಿಕ್ಕನ್ನು ಬದಲಾಯಿಸಿದ ಅಲೋಕ್​, ಕಳೆದ 26 ವರ್ಷಗಳಿಂದ ಮಧ್ಯಪ್ರದೇಶದ ಕೊಚಾಮುದಲ್ಲಿ ವಾಸಿಸುತ್ತಿದ್ದಾರೆ. ಇದು ವಿದ್ಯುತ್ ಮತ್ತು ರಸ್ತೆಯಿಲ್ಲದ ಊರಾಗಿದೆ.

24 ವರ್ಷಗಳಿಂದ ಅಲೋಕ್ ಬುಡಕಟ್ಟು ಜನಾಂಗದವರಿಗೆ ಮರಗಳನ್ನು ನೆಡುವಂತೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದು, ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿತು, ಅವರಂತೆಯೇ ಜೀವನಶೈಲಿ ನಡೆಸುವುದನ್ನು ಅಳವಡಿಸಿಕೊಂಡಿದ್ದಾರೆ. ಏಳೆಂಟು ಭಾಷೆಗಳ ಮೇಲೆ ಹಿಡಿತ ಹೊಂದಿರುವ ವಿದ್ಯಾವಂತ ವ್ಯಕ್ತಿಯನ್ನು, ಇಲ್ಲಿನ ಬುಡಕಟ್ಟು ಜನರು ನಿಧಾನವಾಗಿ ನಂಬಲು ಪ್ರಾರಂಭಿಸಿದರು ಎಂದು ಶ್ರಮಿಕ್ ಆದಿವಾಸಿ ಸಂಘಟನೆಯಯ ಅನುರಾಗ್ ಮೋದಿ ಹೇಳಿದ್ದಾರೆ.

ಇದುವರೆಗೆ ಕಾಣುವ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಇವರು ಸಹ ಒಬ್ಬರು. ಮಧ್ಯಪ್ರದೇಶದ ದೂರದ ಬುಡಕಟ್ಟು ಗ್ರಾಮ ಕೊಚಮುದಲ್ಲಿ ವಾಸಿಸುತ್ತಿದ್ದಾರೆ ಮತ್ತು ಇಲ್ಲಿ ವಿದ್ಯುತ್ ಹಾಗೂ ರಸ್ತೆಗಳ ಕೊರತೆಯಿದೆ. ಈ ಪ್ರದೇಶದಲ್ಲಿ 50,000ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ’ ಎಂದರು.

‘ಗ್ರಾಮೀಣ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಗರ್​ ಅವರು ನೆರೆಯ ಹಳ್ಳಿಗಳಿಗೆ ಬೀಜಗಳನ್ನು ವಿತರಿಸಲು ಸೈಕಲ್ ತುಳಿದು 60 ಕಿಲೋಮೀಟರ್ ಪ್ರಯಾಣಿಸುತ್ತಾರೆ. ಪ್ರೊಫೆಸರ್ ಅಲೋಕ್ ಸಾಗರ್ ಅವರ ಜೀವನವು ಒಂದು ಪ್ರಬಲ ಉದಾಹರಣೆಯಾಗಿದೆ. ಒಂದು ಒಳ್ಳೆಯ ಕೆಲಸಕ್ಕೆ ನಾವು ಬದ್ಧರಾದರೆ, ಯಾವುದೇ ಕಾರಣಗಳು ಅಡಿಯಾಗುವುದಿಲ್ಲ’ ಎಂದು ಬರೆದು ವಿವಿಎಸ್​ ಲಕ್ಷಣ್ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!