ಕಾಂಗ್ರೆಸ್‌ ಗೆ ಶಾಕ್: ಬಿಜೆಪಿ ಸೇರಿದ ವಕ್ತಾರ ರೋಹನ್ ಗುಪ್ತಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದ್ದು, ಮತ್ತೊಬ್ಬ ವಕ್ತಾರರೊಬ್ಬರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ನ ವಕ್ತಾರ ರೋಹನ್ ಗುಪ್ತಾ ಬಿಜೆಪಿ ಸೇರಿದ್ದಾರೆ.

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಪಕ್ಷದ ನಾಯಕರು ತಳಮಟ್ಟದ ವಿಚಾರಗಳನ್ನು ನಿರ್ಲಕ್ಷಿಸುವಷ್ಟು ಉದ್ಧಟತನವನ್ನು ಹೊಂದಿದ್ದಾರೆ ಇದರ ಜೊತೆಗೆ ದೇಶದ ಅತ್ಯಂತ ಹಿರಿಯ ಪಕ್ಷವೆನಿಸಿರುವ ಕಾಂಗ್ರೆಸ್ ತನ್ನ ದಿಕ್ಕು ಹಾಗೂ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ದುರಂಹಕಾರದ ಜೊತೆಗೆ ಜನರ ಸ್ವಾಭಿಮಾನವನ್ನು ತುಳಿಯುತ್ತಿದೆ ಎಂದು ಅವರು ದೂರಿದ್ದಾರೆ. ಆದರೆ ಎಲ್ಲೂ ಅವರು ಯಾರ ಹೆಸರನ್ನು ಯಾವೊಬ್ಬ ನಾಯಕರನ್ನು ಉಲ್ಲೇಖಿಸಿಲ್ಲ. ಆದರೆ ಅವರು ಕಾಂಗ್ರೆಸ್‌ ಪಕ್ಷದ ಸಂವಹನವನ್ನು ನಿರ್ವಹಿಸುವ ವ್ಯಕ್ತಿ ಎಂದು ಅವರು ಹೇಳಿದ್ದಾರೆ.

ಅವರು ಅಧಿಕಾರ ವಹಿಸಿಕೊಂಡಾಗಿನಿಂದ, ಅನೇಕ ಸಮಸ್ಯೆಗಳಿದ್ದವು. ರಾಷ್ಟ್ರೀಯತೆ, ಸನಾತನ, ಆಮ್ ಆದ್ಮಿ ಪಕ್ಷದೊಂದಿಗಿನ ಮೈತ್ರಿಗಳು ಇತ್ಯಾದಿ. ನಾನು ಮತ್ತು ಇತರ ಅನೇಕರು ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದೆವು. ಆದರೆ ನಾವು ಸೈನಿಕರಂತೆ ಹೋರಾಡಿದ್ದೇವೆ. ಆದರೆ ನನ್ನ ತಂದೆ ಅಸೌಖ್ಯರಾಗಿ ಆಸ್ಪತ್ರೆಯಲ್ಲಿದ್ದಾಗಲೂ ಅವರು ಸೌಜನ್ಯಕ್ಕೂ ಒಂದು ಕರೆ ಮಾಡಿಲ್ಲ, ಈ ವೇಳೆ ನಾವು ಇದು ನಿರ್ಧಾರ ಕೈಗೊಳ್ಳಬೇಕಾದ ಸಮಯ ಎಂದು ಭಾವಿಸಿದೆವು ಹಾಗೂ ಇದು ಸ್ವಾಭಿಮಾನದ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪರವಾಗಿ ಸದಾ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದ ನೀವು ಈಗ ಅದೇ ಪಕ್ಷವನ್ನು ಏಕೆ ಸೇರಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗುಪ್ತಾ, ಇದು ಪಕ್ಷದ ದೀರ್ಘಾವಧಿಯ ದೂರದೃಷ್ಟಿಯಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಎಲ್ಲ ವಿಚಾರಗಳ ಪರ ಇಂದು ಬಿಜೆಪಿ ನಿಂತಿದೆ. ಅದರಲ್ಲೂ ಕೇಂದ್ರೀಯ ನೀತಿಗಳು ಮತ್ತು ರಾಷ್ಟ್ರೀಯತೆಯ ಎರಡು ಪ್ರಮುಖ ಮೌಲ್ಯಗಳ ವಿಚಾರದಲ್ಲಿ ಬಿಜೆಪಿ ಸಧೃಡವಾಗಿ ನಿಂತಿದೆ. ಈ ವಿಚಾರಗಳೇ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತಕ್ಕೆ ಸಹಾಯ ಮಾಡಿವೆ ಎಂದು ಗುಪ್ತಾ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!