ಆಸ್ಪತ್ರೆಯಲ್ಲಿ ಒಂದು ಕಾಲದ ಟಾಪ್‌ ನಟ: ಶಸ್ತ್ರಚಿಕಿತ್ಸೆ ಮುನ್ನ ಭಯಗೊಂಡಿದ್ದೆ ಎಂದು ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರೇಮದೇಶಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ ರಾತ್ರೋರಾತ್ರಿ ಸ್ಟಾರ್ ಆದ ನಾಯಕ ಅಬ್ಬಾಸ್.  ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದ್ದಂತೆ ಅಬ್ಬಾಸ್ ಗೆ ನಾಯಕನಾಗಿ ಹಲವು ಆಫರ್ ಗಳು ಬಂದವು. ತೆಲುಗು ಮತ್ತು ತಮಿಳಿನಲ್ಲಿ ಹೀರೋ, ಸೆಕೆಂಡ್ ಹೀರೋ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾ ಮಾಡಿದ್ದಾರೆ. 2015 ರಲ್ಲಿ, ಅವರು ಅಂತಿಮವಾಗಿ ಮಲಯಾಳಂ ಚಿತ್ರ ಮಾಡಿದ ಬಳಿಕ ಸಿನಿಮಾಗೆ ಗುಡ್‌ ಬೈ ಹೇಳಿ ವಿದೇಶಕ್ಕೆ ಹೋಗಿ ನೆಲೆಸಿದ್ದು, ಸಾಫ್ಟ್ ವೇರ್ ಉದ್ಯೋಗ ಮಾಡುತ್ತಿದ್ದಾರೆ.

ವಿದೇಶಕ್ಕೆ ಹೋದರೂ, ಸಿನಿಮಾ ಬಿಟ್ಟರೂ ಆಗಾಗ ತಮ್ಮ ಫೇಸ್ ಬುಕ್ ಪೋಸ್ಟ್ ಗಳ ಮೂಲಕ ಪ್ರೇಕ್ಷಕರ ಸನಿಹದಲ್ಲಿದ್ದಾರೆ. ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರಂತೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಅಬ್ಬಾಸ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಆ ಫೋಟೋವನ್ನು ಶೇರ್ ಮಾಡಿದ ನಂತರ..” ಆಸ್ಪತ್ರೆಯಲ್ಲಿದ್ದಾಗ ನಾನು ತುಂಬಾ ಚಿಂತಿತನಾಗಿದ್ದೆ. ಸ್ವಲ್ಪ ಭಯವೂ ಆಯಿತು. ನಾನೇ ನನ್ನ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದೆ. ನನ್ನ ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳಲು ನಾನು ಸಾಕಷ್ಟು ಪ್ರಯತ್ನಿಸಿದೆ. ನನಗೆ ಶಸ್ತ್ರಚಿಕಿತ್ಸೆ ಆಗಿದೆ ನಾನೀಗ ಚೆನ್ನಾಗಿದ್ದೇನೆ. ನಾನು ಬೇಗನೆ ಮನೆಗೆ ಬರಲು ಬಯಸುತ್ತೇನೆ. ನಿಮ್ಮ ಪ್ರೀತಿ ಮತ್ತು ಪ್ರಾರ್ಥನೆಯೇ ನನ್ನ ಬೆಂಬಲ,’’ ಎಂದು ಹೇಳಿದರು. ಆದರೆ ಯಾವ ಸರ್ಜರಿ ಮಾಡಲಾಗಿದೆ ಎಂಬುದನ್ನು ಅಬ್ಬಾಸ್ ಹೇಳಿಲ್ಲ. ಅಬ್ಬಾಸ್ ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!