ಎಬಿಜಿ ಶಿಪ್‌ಯಾರ್ಡ್ ವಂಚನೆ ಪ್ರಕರಣ: ಮಾಜಿ ಮುಖ್ಯಸ್ಥ ಸೇರಿ 24 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ಯಾಂಕ್ ಗೆ 23,000 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಎಬಿಜಿ ಶಿಪ್ ಯಾರ್ಡ್’ನ ಮಾಜಿ ಅಧ್ಯಕ್ಷ ರಿಷಿ ಅಗರ್ವಾಲ್ ಮತ್ತು ಇತರರ ವಿರುದ್ಧ ಕೇಂದ್ರ ತನಿಖಾ ದಳವು ಚಾರ್ಜ್ ಶೀಟ್ ಸಲ್ಲಿಸಿದೆ.

ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಸಂಸ್ಥೆಯು ಆರೋಪಿ ಅಗರ್ವಾಲ್ ಮತ್ತು ಐದು ವ್ಯಕ್ತಿಗಳು ಮತ್ತು ಮೂರು ಸಿಂಗಾಪುರ ಮೂಲದ ಸಂಸ್ಥೆಗಳು ಸೇರಿದಂತೆ 19 ಕಂಪನಿಗಳನ್ನು ಆರೋಪಿಗಳೆಂದು ಹೆಸರಿಸಿದೆ.

22,842 ಕೋಟಿ ರೂ.ಗಳ ವಂಚನೆಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಮುಂಬೈ ಮೂಲದ ಖಾಸಗಿ ಕಂಪನಿ ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ಮತ್ತು ಅದರ ಅಧ್ಯಕ್ಷ ಮತ್ತು ಪ್ರವರ್ತಕರು ಸೇರಿದಂತೆ 25 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!