Thursday, July 7, 2022

Latest Posts

ಅಭಿಲಾಶಾ ಬಾರಕ್- ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರಿನ ಮೊದಲ ಮಹಿಳಾ ಪೈಲಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನೆಯ ಯುದ್ಧ ಹೆಲಿಕಾಪ್ಟರಿನ ಪ್ರಥಮ ಪೈಲಟ್ ಎಂಬ ಇತಿಹಾಸ ಬರೆದಿದ್ದಾರೆ 26ರ ಹರೆಯದ ಅಭಿಲಾಶಾ ಬಾರಕ್.
ಹರ್ಯಾಣದ ಅಭಿಲಾಶಾ ಮಿಲಿಟರಿ ಪರಿಸರದಲ್ಲೇ ಬೆಳೆದವರು. ಇವರ ತಂದೆ 2011ರಲ್ಲಿ ಸೇನೆಯಿಂದ ನಿವೃತ್ತರಾದವರು. ಇವರ ಸಹೋದರ 2013ರಲ್ಲಿ ಮಿಲಿಟರಿ ಅಕಾಡಮಿಯಿಂದ ತೇರ್ಗಡೆ ಹೊಂದಿದ್ದಾರೆ.
2016ರಲ್ಲಿ ದೆಹಲಿ ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ ಮುಗಿಸಿರುವ ಅಭಿಲಾಶಾ, 2018ರಲ್ಲಿ ಸೇನಾ ತರಬೇತಿಗೆ ಸೇರಿಕೊಂಡರು. ಆಕೆ ತರಬೇತಿ ಪೂರ್ತಿಗೊಳಿಸಿದ ಕಾಲಕ್ಕೆ ಮಹಿಳೆಯರನ್ನು ಸೆಣೆಸಾಟದ ಜವಾಬ್ದಾರಿಯ ಹುದ್ದೆಗಳಲ್ಲಿ ಸೇರಿಸಿಕೊಳ್ಳುವ ನಿರ್ಣಯವಿನ್ನೂ ಆಗಿರಲಿಲ್ಲ. ನಿಯಮ ಬದಲಾಗುತ್ತಲೇ ಅಭಿಲಾಶಾ ಅವರಿಗೀಗ ಯುದ್ಧ ಹೆಲಿಕಾಪ್ಟರಿನ ಮೊದಲ ಮಹಿಳಾ ಪೈಲಟ್ ಆಗುವ ಅವಕಾಶ ಸಿಕ್ಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss