ಹೊಸ ದಿಗಂತ ಡಿಜಿಟಲ್ ಡೆಸ್ಕ್;
ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಮುದ್ದು ಮೊಮ್ಮಗನಿಗೆ ‘ರಾಣಾ ಅಮರ್ ಅಂಬರೀಶ್’ ಎಂದು ನಾಮಕರಣ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವ ಪುತ್ರನಿಗೆ ‘ರಾಣಾ ಅಮರ್ ಅಂಬರೀಶ್’ ಎಂದು ಹೆಸರಿಡಲಾಗಿದೆ.
ಮಂಡ್ಯದ ಗಂಡು ಖ್ಯಾತಿಯ ದಿವಂಗತ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ಅಂಬರೀಶ್ ಅವರ ಮೊಮ್ಮಗನಿಗೆ ರೆಬೆಲ್ ಸ್ಟಾರ್ ಕುಟುಂಬಸ್ಥರು ‘ಅ’ ಅನ್ನೋ ಅಕ್ಷರದಿಂದಲೇ ಶುರುವಾಗೋ ಹೆಸರನ್ನು ಇಡೋ ಆಸೆ ಹೊಂದಿದ್ದರು.
ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರಕ್ಕೆ ರೆಬೆಲ್ ಸ್ಟಾರ್ ಕುಟುಂಬದ ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಕಿಚ್ಚ ಸುದೀಪ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ಬಂದಿದ್ದ ಕಿಚ್ಚ ಸುದೀಪ್ ಅವರು ಸ್ಪೆಷಲ್ ಗಿಫ್ಟ್ ಒಂದನ್ನ ಅಭಿಷೇಕ್ ಅಂಬರೀಶ್‌ಗೆ ನೀಡಿದ್ದಾರೆ.