ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಭಿಷೇಕ್ ಶರ್ಮಾ, ಕ್ಲಾಸೆನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಿಎಸ್ಕೆ ವಿರುದ್ಧದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 194 ರನ್ಗಳಿಸಿತು.
ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ಗೆ ಭರ್ಜರಿ ಆರಂಭ ಸಿಕ್ಕಿತು. ಅಭಿಷೇಕ್ ಶರ್ಮಾ ಪವರ್ ಪ್ಲೇನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 15 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದರು. ಅತ್ತ ಹೆಡ್ 23 ರನ್ಗಳಿಸಿ ಔಟ್ ಆದರು. ಅದೇ ಓವರ್ನಲ್ಲಿ ನಾಯಕ ಇಶಾನ್ ಕಿಶನ್ ಕೂಡ ಗೋಲ್ಡನ್ ಡಕ್ ಆದರು.
ಅಭಿಷೇಕ್ 22 ಎಸೆತಗಳಲ್ಲಿ 6 ಬೌಂಡರಿ, 4 ಭರ್ಜರಿ ಸಿಕ್ಸರ್ಗಳ ಸಹಿತ 59 ರನ್ಗಳಿಸಿ ಕ್ಯಾಚ್ ನೀಡಿ ಔಟ್ ಆದರು. ಬಳಿಕ ಅನಿಕೇತ್ ಶರ್ಮಾ 2, ನಿತೀಶ್ ಕುಮಾರ್ ರೆಡ್ಡಿ 12 ರನ್ಗಳಿಸಿ ಕ್ರಮವಾಗಿ ಪೆವಿಲಿಯನ್ ಸೇರಿದರು. ಮತ್ತೊಂದೆಡೆ ಹೆನ್ರಿಕ್ ಕ್ಲಾಸೆನ್ 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 59 ರನ್ಗಳಿಸಿದರು. 7ನೇ ಕ್ರಮಾಂಕದಲ್ಲಿ ಬಂದ ಸಲೀಲ್ ಅರೋರ 13 ರನ್ಗಳಿಸಿ ಔಟ್ ಆದರೆ, ಇಂಪ್ಯಾಕ್ಟ್ ಸಬ್ ಆಗಿ ಬಂದ ಲಿಯಾಮ್ ಲಿವಿಂಗ್ಸ್ಟೋನ್ 1 ರನ್ಗಳಿಸಿ ನಿರ್ಗಮಿಸಿದರು



