ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಎಂಬ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಪ್ರಾಧಿಕಾರವೇ ರದ್ದಾಗಲಿ ಎಂಬ ಘೋಷಣೆಗಳೊಂದಿಗೆ ಕನ್ನಡಸೇನೆ ಕಾರ್ಯಕರ್ತರು ಹೋರಾಟ ನಡೆಸುತ್ತಿದ್ದಾರೆ.
ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ಸರಕಾರ ಮೊದಲು ನಿಲ್ಲಿಸಲಿ, ಮಳೆ ಬಂದು ನಮ್ಮ ಕೆಆರ್‌ಎಸ್ ಜಲಾಶಯ ತುಂಬುವವರೆಗೂ ನೀರು ಬಿಡುವುದನ್ನು ನಿಲ್ಲಿಸಿ ಎಂದು ಮಂಡ್ಯದ ಕಾವೇರಿ ಭವನದ ಮುಂಭಾಗ ಆಕ್ರೋಶ ಹೊರಹಾಕಿದರು. ಆವರಣದಲ್ಲಿರುವ ಕಾವೇರಿ ಮಾತೆ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಸರಕಾರ ಹಾಗೂ ಪ್ರಾಧಿಕಾರದ ವಿರುದ್ಧ ತಮ್ಮ ಧಿಕ್ಕಾರ ಕೂಗಿದರು.