ಆರ್ಟಿಕಲ್ 370 ರದ್ದು: ‘ಏಕ್ ಭಾರತ್, ಶ್ರೇಷ್ಠ್‌ ಭಾರತ್’ ಪರಿಕಲ್ಪನೆಗೆ ಸಿಕ್ಕಿತು ಬಲ ಎಂದ ಯುಪಿ ಸಿಎಂ ಯೋಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರದ ಕ್ರಮವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ.

‘ಏಕ್ ಭಾರತ್, ಶ್ರೇಷ್ಠ್‌ ಭಾರತ್’ ಎಂಬ ಪರಿಕಲ್ಪನೆಗೆ ಇನ್ನಷ್ಟು ಬಲ ತುಂಬಿದೆ ಎಂದಿದ್ದಾರೆ.

ಎಕ್ಸ್‌ನ ತಮ್ಮ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಸಂವಿಧಾನದ 370ನೇ ಹಾಗೂ 35ಎ ವಿಧಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಶ್ಲಾಘನೀಯ. ಇದರಿಂದ ಒಂದು ಭಾರತ, ಭವ್ಯ ಭಾರತ ಎಂಬ ಹೇಳಿಕೆಯ ಆತ್ಮಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ’ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಜೋಡಿಸುವ ಮೂಲಕ ದೇಶದ ಮುಖ್ಯವಾಹಿನಿಗೆ ತಂದ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರ ಮೊದಲು ಎಂಬ ಪರಿಕಲ್ಪನೆಗೆ ಉತ್ತರ ಪ್ರದೇಶದ 25 ಕೋಟಿ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಧಾನಿ ಮೋದಿ ಅವರ ಯಶಸ್ವಿ ನಾಯಕತ್ವದಡಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಅತ್ಯುತ್ತಮ ಆಡಳಿತ ಸಿಗಲಿದೆ’ ಎಂದು ಅವರು ಆಶಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!