ದೆಹಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ನ್ಯಾಯಂಗ ಬಂಧನ ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ (Manish Sisodia ) ಅವರ ನ್ಯಾಯಂಗ ಬಂಧನವನ್ನು 2024 ಜನವರಿ 10ರವರೆಗೆ ದೆಹಲಿ ನ್ಯಾಯಾಲಯ ವಿಸ್ತರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ಹತ್ತರಂದು ವಿಚಾರಣೆ ನಡೆಸುವುದಾಗಿ ಕೋರ್ಟ್​​ ಹೇಳಿದೆ. ಜೊತೆಗೆ ಹೆಚ್ಚಿನ ದಾಖಲೆ ನೀಡಲು ಜಾರಿ ನಿರ್ದೇಶನಾಲಯದ ವಕೀಲರಿಗೆ ಅವಕಾಶ ನೀಡಿದೆ.

ನವೆಂಬರ್ 21 ರಂದು ನ್ಯಾಯಾಲಯವು ಮನೀಶ್ ಸಿಸೋಡಿಯಾ ಪರ ವಕೀಲರಾದ ಕುಲದೀಪ್ ಸಿಂಗ್, ವಿಜಯ್ ನಾಯರ್, ಸಮೀರ್ ಮಹೇಂದ್ರು, ರಾಜೇಶ್ ಜೋಶಿ ಅವರಿಗೆ ಸಿಬಿಐ ಪ್ರಧಾನ ಕಚೇರಿಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಅಲ್ಲಿಯವರೆಗೆ ಈ ಪ್ರಕರಣದ ವಿಚಾರಣೆಯನ್ನು ಕಾದಿರಿಸಿತ್ತು.

ಈ ಪ್ರಕರಣದ ಬಗ್ಗೆ ನ್ಯಾಯಲಯಕ್ಕೆ ಸಲ್ಲಿರುವ ದಾಖಲೆಗಳು ಇನ್ನು ಬಾಕಿಯಿದ್ದು. ತಕ್ಷಣದಲ್ಲೇ ಸಲ್ಲಿಸಬೇಕು ಎಂದು ಕೋರ್ಟ್​​ ಹೇಳಿದೆ. ಈ ಕಾರಣಕ್ಕಾಗಿ ಮನೀಶ್ ಸಿಸೋಡಿಯಾ ನ್ಯಾಯಂಗ ಬಂಧನವನ್ನು ವಿಸ್ತರಿಸಿದೆ. ತಕ್ಷಣದಲ್ಲಿಯೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರ್ಟ್​​ ಅಭಿಪ್ರಾಯಪಟ್ಟಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!