ಪಂಚಭೂತಗಳಲ್ಲಿ ಲೀನರಾದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ

ಹೊಸ ದಿಗಂತ ವರದಿ, ವಿಜಯಪುರ:

ಆಧ್ಯಾತ್ಮಿಕ ಮೇರು ಶಿಖರದ ಮಹಾಸ್ವಾಮಿ ಸಿದ್ದೇಶ್ವರ ಶ್ರೀಗಳ ಇಚ್ಛೆಯಂತೆ ನಗರದ ಜ್ಞಾನಯೋಗಾಶ್ರಮದ ಅಂಗಳದಲ್ಲಿಯೇ ಮಂಗಳವಾರ ರಾತ್ರಿ ಪಂಚಭೂತಗಳಲ್ಲಿ ಲೀನವಾದರು.

ಆಶ್ರಮದ ವಿಶಾಲ ಅಂಗಳದಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಮೇಲೆ ಒಟ್ಟಲಾಗಿದ್ದ ಶ್ರೀಗಂಧದ ಕಟ್ಟಿಗೆ, ಬೆರಣಿ, ತುಪ್ಪ, ಕರ್ಪೂರಗಳಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನಿಟ್ಟು, ಅಂತಿಮ ನಮನ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು, ಮುರುಗೇಶ ನಿರಾಣಿ, ಶಸಿಕಲಾ ಜೊಲ್ಲೆ ದಂಪತಿ, ಲಕ್ಷ್ಮಣ ಸವದಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಬಿ.ಬೈ. ವಿಜಯೇಂದ್ರ, ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ, ವಚನಾನಂದ ಶ್ರೀ, ಬಸವಜಯ ಮೃತ್ಯುಂಜಯ ಶ್ರೀಗಳು ಸೇರಿದಂತೆ ಹಲವು ಗಣ್ಯರು ಶ್ರೀಗಳ ಪಾರ್ಥಿವ ಶರೀರಕ್ಕೆ ಪ್ರದಕ್ಷಣೆ ಹಾಕಿ, ನಮಿಸಿದರು. ಅನಂತರ ಎಲ್ಲ ಮಠಾಧೀಶರು ಶ್ರೀಗಳ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ನೀಡಿದರು.

ಅಗ್ನಿಸ್ಪರ್ಶ ನೀಡುತ್ತಿದ್ದಂತೆ, ಸುತ್ತಲೂ ನೆರೆದ ಗಣ್ಯರು ಹಾಗೂ ಭಕ್ತಾದಿಗಳ ಕಣ್ಣಂಚಲ್ಲಿ ನೀರು ಜಿನುಗಿತು. ಸಿದ್ದೇಶ್ವರ ಸ್ವಾಮೀಜಿ ಅಮರ, ಸಿದ್ದೇಶ್ವರ ಸ್ವಾಮೀಜಿಗಳಿಗೆ ಜಯವಾಗಲಿ ಎಂದು ಜಯ ಘೋಷಗಳನ್ನು ಭಕ್ತರು ಮೊಳಗಿಸಿದರು.
ಸಿದ್ದೇಶ್ವರ ಶ್ರೀಗಳ ಇಚ್ಛೆಯಂತೆ ಶ್ರಾದ್ಧಿಕ ವಿಧಿ, ವಿಧಾನಗಳಿಲ್ಲದೆ ಅತಿ ಸರಳವಾಗಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!