ಗ್ರ್ಯಾಮಿ ಅವಾರ್ಡ್ಸ್​ಗೆ ನಾಮಿನೇಟ್​ ಆಯ್ತು ನರೇಂದ್ರ ಮೋದಿ ಮಿಲೆಟ್ಸ್‌​ ಹಾಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ ಹಾಡು ಈ ವರ್ಷದ (Grammy award 2024) ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಅವುಗಳನ್ನು ಬೆಳೆಯಲು ರೈತರಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ‘ಅಬಂಡೆನ್ಸ್​ ಇನ್​ ಮಿಲೆಟ್ಸ್​’ ಹಾಡಿನಲ್ಲಿ ಹೇಳಲಾಗಿದೆ. ಈ ಹಾಡಿಗೆ ಭಾರತೀಯ ಮೂಲದ ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಸಂಗೀತ ನೀಡಿದ್ದು, ಅವರ ಪತಿ ಗೌರವ್ ಶಾ ಗಾಯನವನ್ನು ನೀಡಿದ್ದಾರೆ. ನರೇಂದ್ರ ಮೋದಿ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಿರಿಧಾನ್ಯಗಳ ಬಗ್ಗೆ ಅವರು ಮಾತನಾಡಿದ್ದಾರೆ.

ಈ ಹಾಡನ್ನು ಜೂನ್‌ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. 2023ರ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಈ ಹಾಡನ್ನು ಸಿದ್ಧಪಡಿಸಲಾಗಿದೆ. ಈ ಹಾಡು ಯೂಟ್ಯೂಬ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!