ನಾಲ್ಕು ಕಾಲು, ನಾಲ್ಕು ಕೈಗಳಿರುವ ಮಗು ಜನನ, ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಾಲ್ಕು ಕಾಲು ಹಾಗೂ ಕೈಗಳಿರುವ ಮಗು ಜನಿಸಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮೊಹಮ್ಮದ್ ಇರ್ಫಾನ್ ಹಾಗೂ ರುಕ್ಸಾನಾ ದಂಪತಿಗೆ ಅಪರೂಪದ ಮಗು ಜನಿಸಿದ್ದು, ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ.

ಮನೆಯಲ್ಲಿಯೇ ಹೆರಿಗೆ ಆಗಿದ್ದು, ಉಸಿರಾಡಲು ಮಗು ಕಷ್ಟಪಡುತ್ತಿರುವ ಕಾರಣ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಟ್ಯೂಬ್ ಮೂಲಕ ಮಗುವಿಗೆ ಆಹಾರ ನೀಡಲಾಗಿದೆ.

ರುಕ್ಸಾನಾ, ಇರ್ಫಾನ್ ದಂಪತಿಗೆ ಇದು ನಾಲ್ಕನೇ ಮಗುವಾಗಿದ್ದು, ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ವೈದ್ಯರು ಹೆಚ್ಚುವರಿ ನಿಷ್ಕ್ರಿಯ ಅಂಗಗಳನ್ನು ತೆಗೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!