ಹೊಸದಿಗಂತ ವರದಿ ಬಾಗಲಕೋಟೆ :
ನಗರದ ನಿರ್ಮಿತ ಕೇಂದ್ರದ ಯೋಜನಾ ನಿರ್ದೇಶಕ ಶಂಕರ ಗೂಗಿಯವರ ಮನೆ ಮೇಲೆ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಬೆಳ್ಳಂಬೆಳಿಗ್ಗೆ ನವನಗರದಲ್ಲಿ ವಾಸವಿರುವ ಶಂಕರ ಗೂಗಿಯವರ ಮನೆ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಮನೆಯಲ್ಲಿದ್ದ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಶಂಕರ ಗೂಗಿಯವರ ಮನೆಯಲ್ಲಿ ೧ ಲಕ್ಷ ೧೫ ಸಾವಿರ ನಗದು ಪತ್ತೆಯಾಗಿದೆ. ೮ ಲಕ್ಷ ೯೦ ಸಾವಿರ ಮಗನ ಹೆಸರಿನಲ್ಲಿ ರುವುದು ಸಧ್ಯ ಪತ್ತೆಯಾಗಿದೆ. ಇನ್ನೂ ಅವರಿಗೆ ಸಂಬಂಧಿಸಿದ ನಿರ್ಮಿತ ಕೇಂದ್ರ ಕಚೇರಿ ಹಾಗೂ ಅವರ ಆಸ್ತಿಪಾಸ್ತಿ ಬಗ್ಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.