ಕಲ್ಲು ಗಣಿ ಗುತ್ತಿಗೆ ಮೇಲೆ ರಾಜಸ್ವ ಸಂಗ್ರಹಣೆ ಕೆಲಸವನ್ನು ಚುರುಕುಗೊಳಿಸಿ: ಸಚಿವ ಆಚಾರ್ ಹಾಲಪ್ಪ ಬಸಪ್ಪ

ಹೊಸದಿಗಂತ ವರದಿ, ರಾಮನಗರ:

ರಾಮನಗರ ಜಿಲ್ಲೆಯಲ್ಲಿ ಕಲ್ಲು ಗಣಿ ಗುತ್ತಿಗೆ ರಾಜಸ್ವ ಜವನರಿ ೨೦೨೨ ರ ಅಂತ್ಯದವರೆಗೆ ೩೬.೭೭ ಕೋಟಿ ರೂ ಸಂಗ್ರಹಣೆಯಾಗಿದ್ದು, ಶೇ ೭೬.೬ ಸಾಧನೆಯಾಗಿರುತ್ತದೆ. ಮಾರ್ಚ್ ಅಂತ್ಯದವರೆಗೆ ನಿಗಧಿಪಡಿಸಿರುವ ಗುರಿ ಸಾಧಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಸಚಿವರಾದ  ಆಚಾರ್ ಹಾಲಪ್ಪ ಬಸಪ್ಪ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು, ಸದರಿ ಸಾಲು ಹೊರತುಪಡಿಸಿ ಹಿಂದಿನ ಸಾಲುಗಳಲ್ಲಿ ಬಾಕಿಯಿರುವ ರಾಜಸ್ವ ಕೂಡ ಸಂಗ್ರಹಿಸಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ೧೨೦ ಬ್ಲಾಕ್‌ಗಳಿದ್ದು, ೫ ಭೂವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ೫ ಜನರಿಗೂ ಸಮನಾಗಿ ಕಾರ್ಯ ಹಂಚಿಕೆ ಮಾಡಿ ರಾಜಸ್ವ ಸಂಗ್ರಹಿಸಿ. ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆಯು ಪರಿಶೀಲಿಸಬೇಕು ಎಂದರು.
ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ ೨೦೧೬ ರ ಪೂರ್ವ ಗಣಿಗಾರಿಕೆಗೆ ಸಂಬoಧಿಸಿದoತೆ ಸ್ವೀಕೃತವಾಗಿರುವ ೨೩ ಅರ್ಜಿಗಳ ಪೈಕಿ ೬ ಸರ್ಕಾರದಿಂದ ಅನುಮೋದನೆಯಾಗಿರುತ್ತದೆ. ಉಳಿದ ಅರ್ಜಿಗಳ ಪೈಕಿ ೯ ಪ್ರಕರಣಗಳು ಕಾವೇರಿ ವನ್ಯ ಜೀವಿ ಧಾಮದ ಪರಿಸರ ಸೂಕ್ಷö್ಮ ವಲಯ ಹಾಗೂ ಜಂಟಿ ಮೋಜಣಿ ಕಾರ್ಯ ಕುರಿತಂತೆ ಬಾಕಿ ಇದ್ದು, ಈ ಪ್ರಕರಣಗಳನ್ನು ಎರಡು ಇಲಾಖೆಗಳು ಶೀಘ್ರ ಪರಿಶೀಲಿಸಿ ವರದಿ ನೀಡಿ ವಿಲೇವಾರಿ ಮಾಡಿ ಎಂದರು.
ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಅನುಮೋದನೆ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ)ನಿಯಮಗಳು ೨೦೧೬ ರ ಅಧ್ಯಾಯ-೬ ಎ ರಡಿ ಕಲ್ಲುಗಣಿಗಾರಿಕೆ ಮಾಡಬಹುದಾದ ೧೨ ಬ್ಲಾಕ್‌ಗಳನ್ನು ೫೧.೩೦ ಎಕರೆ ವಿಸ್ತೀರ್ಣದಲ್ಲಿ ಗುರುತಿಸಿದ್ದು, ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಬಾಕಿ ಇರುವುದನ್ನು ಗಮನಿಸಿದ ಸಚಿವರು ಜಂಟಿ ಪರಿಶೀಲನೆ ಮಾಡಿ ನಿಯಮಾನುಸಾರ ನಿರಾಕ್ಷೇಪಣಾ ಪತ್ರ ನೀಡಿ ಇದರಿಂದ ಬ್ಲಾಕ್‌ಗಳನ್ನು ಹರಾಜು ಮಾಡಿ ರಾಜಸ್ವ ಕೂಡ ಸಂಗ್ರಹಿಸಬಜುದು ಅಕ್ರಮ ಗಣಿಗಾರಿಕೆಯನ್ನು ಕಡಿಮೆ ಮಾಡಬಹುದು ಎಂದರು.
ಗಣಿಗಾರಿಕೆ ಸಂಬoಧಿಸಿದoತೆ ಸಾಗಾಣಿಕೆಗೆ ಒಂದು ರಾಜ್ಯ – ಒಂದು ಜಿ.ಪಿ.ಎಸ್. ಯನ್ನು ಜಾರಿಗೆ ತರಲಾಗುವುದು. ಸಾಗಾಣಿಕೆ ಸಂದರ್ಭದಲ್ಲಿ ವ್ಯೆ ಬ್ರಿಡ್ಜ್ ನಲ್ಲಿ ತೂಕಮಾಡಿ ಟ್ಯಾಗ್ ಸಹ ಇರಬೇಕು ಇದರಿಂದ ಒಂದು ಲೋಡ್‌ಗೆ ಪರವಾನಗಿ ಪಡೆದು ಹೆಚ್ಚು ಸಾಗಾಣಿಕೆ ಮಾಡುವುದನ್ನು ತಡೆಯಲಾಗುವುದು ಎಂದರು.
ಏಪ್ರಿಲ್ ೨೦೨೧ ರಿಂದ ಜನವರಿ ೨೦೨೨ ರವರೆಗೆ ಅನಾಧಿಕೃತ ಖನಿಜ ಸಾಗಾಣಿಕೆಗೆ ಸಂಬoಧಿಸಿದoತೆ ೧೫ ಪ್ರಕರಣಗಳನ್ನು ಪತ್ತೆ ಹಚ್ಚಿ ೮.೭೮ ಲಕ್ಷ ರೂ ದಂಡ, ಅನಧಿಕೃತ ಖನಿಜ ಸಾಗಾಣಿಕೆಗೆ  ಸಂಬoಧಿಸಿದoತೆ ೧೨೫ ಪ್ರಕರಣಗಳನ್ನು ಪತ್ತೆ ಹಚ್ಚಿ ೪೪.೯೮ ಲಕ್ಷ ರೂ ದಂಡ ಸಂಗ್ರಹಿಸಲಾಗಿದೆ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟಡಗಳಿಗೆ ನಿವೇಶನಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಿ.ಎ ನಿವೇಶನಗಳನ್ನು ಗುರುತಿಸಿ ಎಂದರು.
ರಾಮನಗರ ಜಿಲ್ಲೆಯಲ್ಲಿ ಬಹಳಷ್ಟು ಕಾರ್ಖನೆಗಳಿದ್ದು, ಸಿಎಸ್‌ಆರ್ ಅನುದಾನದಡಿ ಮೂಲಭೂತ ಸೌಕರ್ಯಗಳ ಕೊರತೆ ಇರುವ ಅಂಗನವಾಡಿಗಳಿಗೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿ. ಅಂಗನವಾಡಿಗಳಿಗೆ ನೀಡಲಾಗಿರುವ ತೂಕ ಮಾಡುವ ಉಪಕರಣ, ಮೊಬೈಲ್ ಫೋನ್ ಸೇರಿದಂತೆ ವಿವಿಧ ಉಪಕರಣಗಳ ಕಾರ್ಯನಿರ್ವಹಣೆಯ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಎಂದರು.
ಜಿಲ್ಲೆಯಲ್ಲಿ ೮೦ ಅಂಗನವಾಡಿ ಕಟ್ಟಡಗಳ ಉನ್ನತೀಕರಣಕ್ಕಾಗಿ ೮೦ ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು, ಇಲ್ಲಿ ಆಟಿಕೆ ಸಾಮಾಗ್ರಿಗಳನ್ನು ಅಳವಡಿಸಿರುವ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತ ಪಡಿಸಿ ಮಕ್ಕಳಿಗೆ ಕಲಿಕೆಯೊಂದಿಗೆ ಆಟವು ಸಹ ಇರಬೇಕು ಎಂದರು.
ಅoಗನವಾಡಿ ಮಕ್ಕಳಿಗೆ ಬಹುಧಾನ್ಯ ಮಿಶ್ರಣ ಫೌಡರ್ ನೀಡಲಾಗುತ್ತಿದ್ದು, ಇದರ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಿ. ಗುಣಮಟ್ಟದ ಪರೀಕ್ಷೆಗೆ ಒಂದೇ ಸಂಸ್ಥೆಗೆ ಸದಾ ಆಹಾರ ಪದಾರ್ಥ ನೀಡುವ ಬದಲು ಮೈಸೂರಿನ ಸಿ.ಎಫ್.ಟಿ.ಆರ್.ಐ ಗೆ  ಗುಣಮಟ್ಟದ ಪರೀಕ್ಷೆಗೆ ಕಳುಹಿಸಿಕೊಡಿ. ಇದರಿಂದ ಮಕ್ಕಳಿಗೆ ನೀಡಲಾಗುವ ಆಹಾರದಲ್ಲಿ ಅಕ್ರಮವಿದ್ದಾರೆ ಸುಲಭವಾಗಿ ಪತ್ತೆ ಹಚ್ಚಬಹುದು ಎಂದರು.
ಕೋವಿಡ್‌ನಿoದ ಇಬ್ಬರು ಪೋಷಕರನ್ನು ಕಳೆದುಕೊಂಡ ೫ ಮಕ್ಕಳಿದ್ದು, ಇವರಿಗೆ ಸಹಾಯಧನ ಒದಗಿಸಲಾಗುತ್ತಿದೆ. ಇದರ ಜೊತೆಗೆ ಈ ಮಕ್ಕಳ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವ ವ್ಯವಸ್ಥೆಗಳಿದ್ದಾರೆ ಒದಗಿಸಿ ಎಂದರು.
ಸಭೆಯಲ್ಲಿ ರಾಮನಗರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ರಾಮ್ ಪ್ರಸಾದ್ ಮನೋಹರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ  ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಡಾ:ನಂದನ್ ಕುಮಾರ್ ಜೆ.ವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ.ರಾಮನ್,  ಭೂ ವಿಜ್ಞಾನಿ ಗಿರೀಶ್ ಮೋಹನ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!