ಹೊಸದಿಗಂತ ವರದಿ, ಬಳ್ಳಾರಿ:
ಯಾವುದೇ ಕಾಮಗಾರಿಗಳಿರಲಿ, ಗುತ್ತಿಗೆದಾರರು, ಎಂಜನೀಯರ್ ಗಳು ಗುಣಮಟ್ಟ ಕಾಪಾಡಿ, ಇತರರಿಗೆ ಮಾದರಿಯಾಗಬೇಕು ಎಂದು ನಗರ ಸೋಮಶೇಖರ್ ರೆಡ್ಡಿ ಅವರು ಹೇಳಿದರು.
ನಗರದ 1ನೇ ವಾರ್ಡ್ ವ್ಯಾಪ್ತಿಯ ತಾಳೂರು ರಸ್ತೆಯ ಪೊಲೀಸ್ ವಸತಿ ಗೃಹದ ರಸ್ತೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಸಿಸಿ ರಸ್ತೆ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಸೇರಿ ಇತರೇ ಕಾಮಗಾರಿಗಳನ್ನು ಅಧಿಕಾರಿಗಳು, ಎಂಜಿನಿಯರ್, ಗುತ್ತಿಗೆದಾರರು ಮಾದರಿ ರೀತಿಯಲ್ಲಿ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು, ಯಾವುದೇ ಕಾರಣಕ್ಕೂ ಜನರು ಕಾಮಗಾರಿಗಳ ಗುಣಮಟ್ಟದ ಬಗ್ಗೆ, ನಾನಾ ಆರೋಪಗಳ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸಬಾರದು, ನಿಗಧಿತ ಅವದಿಯಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಒಂದನೇ ವಾರ್ಡ್ ಪ್ರದೇಶದಲ್ಲಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡ ರಸ್ತೆ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೂಳಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ರಾಯಚೂರು. ಕೊಪ್ಪಳ. ಬಳ್ಳಾರಿ. ಹಾಲು ಒಕ್ಕೂಟದ ನಿರ್ದೇಶಕ ಜಿ.ವೀರಶೇಖರ ರೆಡ್ಡಿ, ಎಪಿಎಂಸಿ ಅಧ್ಯಕ್ಷ ಉಮೇಶ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಗುಡಿಗಂಟಿ, ಟಿ. ಶ್ರೀನಿವಾಸ್ ಮೋತ್ಕರ್, ಎಪಿಎಂಸಿ ಸದಸ್ಯರಾದ ಜಿ.ಕೃಷ್ಣಾರೆಡ್ಡಿ. ಎ. ಸ್. ಐ.ನಾಗಭೂಷಣ್, ಸೇರಿದಂತೆ 1ನೇ ವಾರ್ಡ್ ನ ಪ್ರಮುಖರು ಭಾಗವಹಿಸಿದ್ದರು.