Monday, October 2, 2023

Latest Posts

ವಿಧಾನ ಪರಿಷತ್ ಸದಸ್ಯರಾಗಿ ಪಿ.ಎಚ್‌.ಪೂಜಾರ ಪ್ರಮಾಣ ವಚನ ಸ್ವೀಕಾರ

ದಿಗಂತ ವರದಿ ಬಾಗಲಕೋಟೆ :

ವಿಜಯಪುರ‌ ಹಾಗೂ ಬಾಗಲಕೋಟೆ ವಿಧಾನ ಪರಿಷತ್ ನೂತನ ಸದಸ್ಯರಾಗಿ ಬಿಜೆಪಿಯ ಹಿರಿಯ ಮುಖಂಡ ಪಿ.ಎಚ್.ಪೂಜಾರ ಗುರುವಾರ ಬೆಂಗಳೂರಿನ ವಿಧಾನ ಪರಿಷತ್ ಸಭಾಪತಿಯವರ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಭಾಪತಿ ಬಸವರಾಜ ಹೊರಟ್ಟಿಯವರು ಪ್ರಮಾಣ ವಚನ ಬೋಧಿಸಿ ನೂತನ ಸದಸ್ಯ ಪೂಜಾರ ಅವರನ್ನು ಅಭಿನಂಧಿಸಿದರು. ಕೋವಿಡ್ ಹಿನ್ನಲೆಯಲ್ಲಿ ಸೀಮಿತ‌ ಜನರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅವಕಾಶ ನೀಡಲಾಗಿತ್ತು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಪಿ.ಎಚ್.ಪೂಜಾರ‌‌ ಅವರು, ಅವಳಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮುಖಂಡ ಶಂಭುಗೌಡ ಪಾಟೀಲ,ಚಂದ್ರಶೇಖರ್ ಕೇಸನೂರ, ರಾಜಶೇಖರ ಮುದೇನೂರ, ರಾಜು ಚಿತ್ತವಾಡಗಿ,ಚನ್ನಪ್ಪ ಮಾಚಕನೂರ ಇನ್ನಿತರರು ಉಪಸ್ಥಿತರಿದ್ದು ನೂತನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರನ್ನು ಅಭಿನಂಧಿಸಿ ಸನ್ಮಾನಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!