ನನ್ನ ಹತ್ರ ಧೋನಿ ಫೋನ್ ನಂಬರ್ ಇಲ್ಲ: ಮಾಜಿ ಕೋಚ್ ರವಿಶಾಸ್ತ್ರಿ ಹೀಗೆ ಹೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು ಮನಬಿಚ್ಚಿ ಹೊಗಳಿದ್ದಾರೆ.
ಸಂದರ್ಶನವೊಂದರಲ್ಲಿ ಧೋನಿ ಬಗ್ಗೆ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ ಧೋನಿಯಂಥ ಆಟಗಾರರನ್ನು ನಾನು ನೋಡಿಯೇ ಇಲ್ಲ. ಸಾಕಷ್ಟು ಜನರನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಆದರೆ ಧೋನಿ ವ್ಯಕ್ತಿತ್ವಕ್ಕೆ ಸಾಟಿಯೇ ಇಲ್ಲ. ಫೀಲ್ಡ್‌ನಲ್ಲಿಯೂ ಫೀಲ್ಡ್‌ನ ಹೊರಗೂ ಒಂದು ದಿನಕ್ಕೂ ಧೋನಿ ಸಂಯಮ ಕಳೆದುಕೊಂಡಿದ್ದು ನಾನು ನೋಡಿಯೇ ಇಲ್ಲ ಎಂದಿದ್ದಾರೆ.

ಈ ಲಿಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಸೇರುತ್ತಾರೆ. ಅವರಿಗೆ ಅಪರೂಪದಲ್ಲಿ ಅಪರೂಪಕ್ಕೆ ಕೋಪ ಬರುತ್ತಿತ್ತು. ಆದರೆ ಧೋನಿಗೆ ಅದೂ ಕೂಡ ಇಲ್ಲ. ಧೋನಿ ಜೀವನಕ್ಕೆ ತುಂಬಾ ಬೆಲೆ ಕೊಡ್ತಾರೆ, ಧೋನಿ ನಂಬರ್ ಕೂಡ ನನ್ನ ಬಳಿ ಇಲ್ಲ, ಯಾಕಂದ್ರೆ ಧೋನಿ ಫೋನ್ ಬಳಸೋದು ತುಂಬಾ ಕಮ್ಮಿ. ಒಂದು ದಿನಕ್ಕೂ ಫೋನ್ ಇಟ್ಟುಕೊಂಡು ಕೂರುವುದು, ಮಾತನಾಡುವುದು, ಏನಾದರೂ ನೋಡುತ್ತಾ ಕೂರುವುದನ್ನು ನಾನು ಎಂದಿಗೂ ನೋಡಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!