ದಿಗಂತ ವರದಿ ಹಾಸನ :
ಚಲಿಸುತ್ತಿದ್ದ ಲಾರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿಉರಿದ ಘಟನೆ , ಸಕಲೇಶಪುರ ತಾಲ್ಲೂಕಿನ, ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯ, ಡಬಲ್ ಟರ್ನ್‌ನಲ್ಲಿ ನಡೆದಿದೆ.
ನೋಡನೋಡುತ್ತಿದ್ದಂತೆ ಚಲಿಸುತ್ತಿದ್ದ ಲಾರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಡೆದಿದೆ. ಕೂಡಲೇ ಚಾಲಕ ರಸ್ತೆ ಬದಿ ಲಾರಿ ನಿಲ್ಲಿಸಿದ್ದಾನೆ.
ಹೊತ್ತಿ ಉರಿದ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಅಸಹಾಯಕನಿಗೆ ನಿಂತ ಲಾರಿ ಚಾಲಕ, ಇದೇ ರಸ್ತೆಯಲ್ಲಿ ಬರುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಅಂಬ್ಯುಲೆನ್ಸ್ ನಿಲ್ಲಿಸಿ ಸೈರನ್ ಹಾಕಿ ವಾಹನ ಸವಾರರಿಗೆ ಎಚ್ಚರಿಕೆಯಿಂದ ಚಲಿಸುವಂತೆ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದೆ.