ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ತರುಣ್ ಅತ್ತನೂರು ಪಾಠದ ಮಧ್ಯೆ ಏಕಾಏಕಿ ಕುಸಿದುಬಿದ್ದಿದ್ದಾನೆ. ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಎಂಟನೇ ತರಗತಿ ವಿದ್ಯಾರ್ಥಿ ತರುಣ್ ಎಂದಿನಂತೆ ಶಾಲೆಗೆ ಆಗಮಿಸಿದ್ದ. ಆದರೆ ಶಾಲೆಯಲ್ಲಿ ಲೋ ಬಿಪಿಯಿಂದ ಏಕಾಏಕಿ ಕುಸಿದು ಬಿದ್ದಿದ್ದ. ಈತನನ್ನು ಶಿಕ್ಷಕರು, ಸಿಬ್ಬಂದಿಗಳು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಅಷ್ಟೊತ್ತಿಗಾಗಲೇ ತರುಣ್ ಮೃತಪಟ್ಟಿದ್ದ.
ಬಾಳಿ ಬದುಕಬೇಕಿದ್ದ ಮಗ ಕಣ್ಣೆದುರೇ ಪ್ರಾಣಬಿಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಶಾಲೆಯ ಶಿಕ್ಷಕರು, ಸ್ನೇಹಿತರು ಕಣ್ಣೀರಿಟ್ಟಿದ್ದಾರೆ.