ದಿಗಂತ ವರದಿ ಮೈಸೂರು:
ಕುವೆಂಪುನಗರದ ನಿಮಿಷಾಂಭ ಬಡಾವಣೆಯ ವಿವೇಕಾನಂದ ವೃತ್ತಕ್ಕೆ ಸೇರುವ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರವಾಹನ ಹಾಗೂ ಕಾರ್ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನದ ಚಾಲಕ ತೀವ್ರತೆರನಾದ ಗಾಯವಾಗಿ ನರಳಾಡುತ್ತಿದ್ದ ಬಿದ್ದಿದ್ದನು.
ಕುವೆಂಪುನಗರದ ಮೆಗಾ ಮೆಡಿಕಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾದಯಾತ್ರೆ ಮುಗಿಸಿ ಅದೇ ರಸ್ತೆಯಲ್ಲಿ ವಾಪಾಸ್ಸಾಗುತ್ತಿದ್ದಾಗ ಅಪಘಾತವನ್ನು ಗಮನಿಸಿ ಕೂಡಲೇ ಧಾವಿಸಿದ ಎಂಕೆ ಸೋಮಶೇಖರ್ ರವರು ಗಾಯಾಳುವನ್ನು ಆಟೋ ಮೂಲಕ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದರು.
ಇನ್ನಾದರೂ ಪಾಲಿಕೆ ಜಿಲ್ಲಾಡಳಿತ ಕೂಡಲೇ ಗುಂಡಿಗಳನ್ನು ಮುಚ್ಚಿ ನಾಗರೀಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಆಗ್ರಹಿಸಿದರು. ಕೆಆರ್ ಕ್ಷೇತ್ರ ಮಾದರಿ ಕ್ಷೇತ್ರ,ಸುರಕ್ಷತೆಯ ರಸ್ತೆಯುಳ್ಳ ಕ್ಷೇತ್ರ ಎಂದು ಬರೀ ಹೇಳಿಕೆ ,ಪ್ರಚಾರಕಷ್ಟೆ ಸೀಮಿತಗೊಳಿಸಿದ್ದಾರೆ. ಕೂಡಲೇ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಸರಿಪಡಿಸಿ ಅನಾಹುತಗಳು ಸಂಭವಿಸದAತೆ ಕಾರ್ಯೋನ್ಮುಖರಾಗಿ ಕೆಲಸ ಮಾಡಲಿ. ಹೇಳಿಕೆಗಳಿಗೆ ಅಭಿವೃದ್ಧಿ ಸೀಮಿತವಾಗದಿರಲಿ ಎಂದು ಕಿಡಿಕಾರಿದರು.
ಕಳೆದ ಹಲವಾರು ದಿನಗಳಿಂದಲೂ ನಾಗರೀಕರು, ಹಿರಿಯರು, , ಅಂಗವಿಕಲರು ಕೆಆರ್ ಕ್ಷೇತ್ರದ ಎಲ್ಲಾ ಬಡಾವಣೆಗಳ ರಸ್ತೆಗಳಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸಿದ್ದು, ಎರಡು ಮೂರು ಜನ ಗುಂಡಿಗಳಲ್ಲಿ ಬಿದ್ದು ಜೀವ ತೆತ್ತಿದ್ದಾರೆ.ಇನ್ನೂ ಕೆಲವರು ಕೈ ಕಾಲು ಮುರಿದುಕೊಂಡು ಸರ್ಕಾರಕ್ಕೆ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ,ಜನಪ್ರತಿನಿಧಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.