ಮೈಸೂರಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ 123ನೇ ಜಯಂತಿ ಆಚರಣೆ

ಹೊಸದಿಗಂತ ವರದಿ, ಮೈಸೂರು:

ವೀರ ಸಾವರ್ಕರ್ ಯುವ ಬಳಗದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ 123ನೇ ಜಯಂತಿಯನ್ನು ಶುಕ್ರವಾರ ನಗರದಲ್ಲಿ ಆಚರಿಸಲಾಯಿತು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ವೃತ್ತದಲ್ಲಿನ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ “ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು ಕರ್ನಾಟಕದ ಹೆಮ್ಮೆ, ಕೊಡಗಿನ ಸುಪುತ್ರ. ಭಾರತೀಯ ಭೂಸೇನೆಯ ಮೊದಲನೇ ದಂಡನಾಯಕನ ಕೊಡುಗೆಯನ್ನು ಇಂದಿನ ಪೀಳಿಗೆ ಸಹ ನೆನೆಯುತ್ತಿರುವುದು ಸಂತೋಷದ ವಿಚಾರ” ಎಂದು ತಿಳಿಸಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ “ಕಾರಿಯಪ್ಪನವರ ಜಯಂತಿಯನ್ನು ಸರ್ಕಾರದ ವತಿಯಿಂದ ಪ್ರತಿ ವರ್ಷ ಆಚರಿಸುವಂತಾಕಬೇಕು. ಆಗ ಮತ್ತಷ್ಟು ಜನರು ಅವರನ್ನು ಸ್ಮರಿಸಿ ಗೌರವಿಸಲು ಸಾಧ್ಯವಾಗುತ್ತದೆ” ಎಂದರು.
ಇದೇ ಸಂದರ್ಭದಲ್ಲಿ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಬಿಜೆಪಿ ಮುಖಂಡರಾದ ಮಹೇಶ್ ರಾಜ್ ಅರಸ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಂಗನಾಥ್, ಎಸ್ ಎನ್ ರಾಜೇಶ್, ತಡೆ ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್, ನವೀನ್ ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್, ಪ್ರಶಾಂತ್, ಉಮೇಶ್ ಇನ್ನಿತರರು ಹಾಜರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!