ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಫರ್ಲಾ ಚರ್ಚ್ ಬಳಿ ಸರ್ಕಾರಿ ಬಸ್ ಮತ್ತು ಟ್ಯಾಂಕರ್ ಲಾರಿ ನಡುವೆ ಅಪಘಾತ ನಡೆದಿದ್ದು , ಈ ಸಂದರ್ಭ ಹೆದ್ದಾರಿ ಪಕ್ಕದಲ್ಲಿರುವ ಮನೆಗೆ ಸರಕಾರಿ ಬಸ್ಸು ಡಿಕ್ಕಿಯಾಗಿ ಹಾನಿಯಾಗಿದೆ. ಬಸ್ ನಲ್ಲಿದ್ದ ನಾಲ್ವರು ಪ್ರಯಾಣಿಕರು
ಸಣ್ಣ ಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
ಶನಿವಾರ ಈ ಘಟನೆ ಸಂಭವಿಸಿದ್ದು, ಧರ್ಮಸ್ಥಳ ಕಡೆಯಿಂದ ಕೆಎಸ್‌ಆರ್ ಟಿಸಿ ಬಸ್ಸು ಬರುತ್ತಿದ್ದು ಎದುರಿನಿಂದ ಟ್ಯಾಂಕರ್ ಲಾರಿಯೊಂದನ್ನು ಇನ್ನೊಂದು ಟ್ಯಾಂಕರ್ ಲಾರಿ ಓವರ್ ಟೇಕ್ ಮಾಡುವ ಬರದಲ್ಲಿ ಪರಸ್ಪರ ಅಪಘಾತ ಸಂಭವಿಸಿದೆ.
ಮನೆಗೆ ಬಡಿದ ಬಸ್
ಡಿಕ್ಕಿಯ ರಭಸಕ್ಕೆ ಬಸ್ಸು ಹೆದ್ದಾರಿ ಪಕ್ಕ ಇರುವ ಭುಜಂಗ ಮೂಲ್ಯ ಎಂಬವರ ಮನೆಗೆ ಬಡಿದು ಹಾನಿ ಉಂಟಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.