ಸ್ಕೂಟಿ ಮತ್ತು ಬೈಕ್‌ ನಡುವೆ ಅಪಘಾತ: ಇಬ್ಬರಿಗೆ ಗಾಯ

ಹೊಸದಿಗಂತ ವರದಿ ಅಂಕೋಲಾ :

ಸ್ಕೂಟಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮತ್ತು ಹಿಂಬದಿ ಸವಾರ ಗಾಯಗೊಂಡ ಘಟನೆ ಪಟ್ಟಣದ ಪಶು ಆಸ್ಪತ್ರೆ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಬೈಕ್‌ ಸವಾರ ಅಗಸೂರು ನಿವಾಸಿ ಕಾರ್ತಿಕ ಹೇಮಚಂದ್ರ ನಾಯ್ಕ (21) ಮತ್ತು ಹಿಂಬದಿಯಲ್ಲಿ ಕುಳಿತಿದ್ದ ವಾಸರಕುದ್ರಿಗೆ ನಿವಾಸಿ ಶಾಲಿನಿ ಮಾರುತಿ ನಾಯ್ಕ (38) ಅವರಿಗೆ ಗಾಯಗಳಾಗಿವೆ.

ಗೋಖಲೆ ಕಾಲೇಜಿನ ಎದುರಿನ ಪ್ಲೈ ಓವರ್ ಕೆಳಗಿರುವ ಸರ್ವಿಸ್ ರಸ್ತೆಯಲ್ಲಿ ತಮ್ಮ ಬದಿಯಲ್ಲಿ ಬೈಕ್ ಮೂಲಕ ಪಿಕಾಕ್ ಕ್ರಾಸ್ ಕಡೆ ಸಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಅತಿ ವೇಗವಾಗಿ ಬಂದ ಕೆ.ಎ 30 ಎಲ್ 6593 ನೋಂದಣಿ ಸಂಖ್ಯೆಯ ಸ್ಕೂಟಿ ಸವಾರ ತನ್ನ ವಾಹನವನ್ನು ಬಲಕ್ಕೆ ತಿರುಗಿಸಿ ಬೈಕಿಗೆ ಡಿಕ್ಕಿ ಹೊಡೆದಿರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಆರೋಪಿ ತನ್ನ ವಾಹನವನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!