ಜಲ್ಲಿಕಟ್ಟು ವೇಳೆ ಅವಘಡ: ಹೋರಿ ತಿವಿದು 19 ಮಂದಿ ಗಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತಮಿಳುನಾಡಿನ ಮಧುರೈನ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿ ತಿವಿದು 19 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಗಾಯಗೊಂಡ 11 ಮಂದಿ ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಪೊಂಗಲ್ ಹಬ್ಬದ ಅಂಗವಾಗಿ ಮಧುರೈನ ಮೂರು ಗ್ರಾಮಗಳಲ್ಲಿ ಜಲ್ಲಿಕಟ್ಟು ಅದ್ದೂರಿಯಾಗಿ ಆರಂಭವಾಯಿತು.

ಸೋಮವಾರ ಮತ್ತು ಮಂಗಳವಾರ ಪಾಲಮೇಡು ಮತ್ತು ಅಲಂಗನಲ್ಲೂರಿನಲ್ಲಿ ಮತ್ತಷ್ಟು ಜಲ್ಲಿಕಟ್ಟು ಕಾರ್ಯಕ್ರಮಗಳು ನಡೆಯಲಿವೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ 300 ಗೂಳಿ ಪಳಗಿಸುವವರಿಗೆ ಮತ್ತು 150 ಪ್ರೇಕ್ಷಕರಿಗೆ ಮಾತ್ರ ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!