ಹೊಸದಿಗಂತ ವರದಿ , ವಿಜಯಪುರ:
ಕರ್ನಾಟಕದ ಗಡಿ ಭಾಗದಲ್ಲಿರುವ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಸಾರಿಗೆ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ವಿಶ್ವನಾಥ ಬಸನಗೌಡ ಬಿರಾದಾರ ಹಳ್ಳೂರ (35) ಸಾವಿಗೀಡಾದ ವ್ಯಕ್ತಿ.
ವಿಶ್ವನಾಥ ಬಿರಾದಾರ ಈತ ಕೆಲ ತಿಂಗಳಿಂದ ಮಂತ್ರಾಲಯದಲ್ಲೆ ಸಣ್ಣ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ತನ್ನ ಬೈಕನಲ್ಲಿ ಮುದ್ದೇಬಿಹಾಳಕ್ಕೆ ಬರುವಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರು ಘಟಕದ ಬಸ್ಸಿಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಈ ಸಂಬಂಧ ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.