ಹೊಸದಿಗಂತ ಡಿಜಿಟಲ್ ಡೆಸ್ಕ್
ನಾನು ನಾಯಕನಾದ ದಿನದಿಂದಲೇ ಈ ದಿನಕ್ಕಾಗಿ ತಯಾರಿ ನಡೆಸುತ್ತಾ ಬಂದಿದ್ದೇವೆ. ಆಸೀಸ್ ತಂಡದ ಫಾರ್ಮ್ ಬಗ್ಗೆ ನಮಗೆ ಚಿಂತೆಯಿಲ್ಲ ನಮ್ಮ ಶಕ್ತಿ ಏನೆಂಬುದು ನಾಳೆ ಗೊತ್ತಾಗುತ್ತದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೇಳಿದ್ದಾರೆ.
ಕಳೆದ 2 ವರ್ಷಗಳಿಂದ ಆಟದ ಸ್ವರೂಪಗಳಿಗೆ ಅನುಗುಣವಾಗಿ ಆಟಗಾರರನ್ನು ಗುರುತಿಸಬೇಕಾಗಿತ್ತು. ನಾವು ಆಟಗಾರರಿಗೆ ಅವರ ಪಾತ್ರದ ಕುರಿತು ಸ್ಪಷ್ಟನೆ ನೀಡಬೇಕಿತ್ತು. ಈ ಕುರಿತು ನಾಯಕ ಮತ್ತು ಕೋಚ್ ನಡುವೆ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇವೆ ಎಂದು ಹೇಳಿದ್ದಾರೆ.
ನಾವು ಮನಸ್ಥಿತಿ ಮತ್ತು ಪಾತ್ರಗಳನ್ನು ಸ್ಪಷ್ಟವಾಗಿ ಇರಿಸಿಕೊಳ್ಳಲು ನಮ್ಮಿಂದಾದ ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಿದ್ದೇವೆ. ಇಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ಸಾಗಿದೆ. ನಾಳೆಯೂ ಇದೇ ರೀತಿ ಇರುತ್ತದೆ ಎಂಬ ಭರವಸೆ ಇದೆ. ನನಗೆ ಹಿಂದಿನ ಗೆಲುವುಗಳಿಂದ ಪಂದ್ಯ ಗೆಲ್ಲುತ್ತೇವೆ ಎಂಬ ನಂಬಿಕೆಯಿಲ್ಲ, ಆ ದಿನ ಏನು ಮಾಡುತ್ತೇವೆ ಅನ್ನೋದು ಮುಖ್ಯ. ಆ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಅದೇ ರೀತಿ ಸಮತೋಲನವನ್ನೂ ಕಾಯ್ದುಕೊಳ್ಳುತ್ತೇವೆ ಎಂದಿದ್ದಾರೆ.
ಅಶ್ವಿನ್ (Ashwin) ಅವರು ಪ್ಲೇಯಿಂಗ್ 11 ನಲ್ಲಿ ಆಡುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿ, ಪ್ಲೇಯಿಂಗ್-11 ನಲ್ಲಿ ಯಾರನ್ನೂ ಕಣಕ್ಕಿಳಿಸಬೇಕು ಎಂಬುದನ್ನೂ ಇನ್ನೂ ನಿರ್ಧಾರ ಮಾಡಿಲ್ಲ. ಪಿಚ್ ಮೌಲ್ಯಮಾಪನ ಮಾಡಿ ನಂತರ ನಮ್ಮ ತಂಡವನ್ನು ನಿರ್ಧರಿಸುತ್ತೇವೆ. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಆಡಿದ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದೆ. ಅವರೂ ಉತ್ತಮ ಕ್ರಿಕೆಟ್ ಆಡಿದ್ದಾರೆ. ಎರಡೂ ತಂಡಗಳು ಫೈನಲ್‌ಗೆ ಅರ್ಹವಾಗಿವೆ. ಆಸ್ಟ್ರೇಲಿಯಾ ಏನು ಮಾಡಬಹುದೆಂದು ನಮಗೆ ತಿಳಿದಿದೆ. ಆದ್ರೆ ನಾವು ಕೂಡ ಏನು ಮಾಡಬೇಕೆಂದು ನೋಡುತ್ತೇವೆ ಅವರು ಯಾವ ರೀತಿಯ ಫಾರ್ಮ್‌ನಲ್ಲಿದ್ದರೂ ನಮಗೆ ಚಿಂತೆಯಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.