ಹೊಸದಿಗಂತ ವರದಿ ರಾಣೆಬೇನ್ನೂರು:
ಜಮೀನಿನಲ್ಲಿ ಪಂಪಸೆಟ್ ದುರಸ್ತಿ ಮಾಡಲು ಹೋದಾಗ ವಿದ್ಯುತ್ ತಗುಲಿ ಅಪ್ಪ-ಮಗ ಸಾವನ್ನಪ್ಪಿದ ಘಟನೆ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ರೈತ ಕರಬಸಪ್ಪ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ ಕಡೇನಾಯಕನಹಳ್ಳಿ(26) ಮೃತಪಟ್ಟ ದುರ್ದೈವಿಗಳು.
ಗ್ರಾಮದ ಹೊರಭಾಗದಲ್ಲಿದ್ದ ಜಮೀನಿನಲ್ಲಿ ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ ಸ್ಟಾರ್ಟ್ ಮಾಡಲು ಹೋಗಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಅಪ್ಪ-ಮಗ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ ಈ ಕುರಿತು ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.