ದಿಗಂತ ವರದಿ ಕಾರಟಗಿ:
ಮೃತ ಪಿಎಸ್‌ಐ ಪರಶುರಾಮ ಅವರ ಸೋಮನಾಳ ಗ್ರಾಮದ ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಭೇಟಿ ನೀಡಿದರು.
ಬೆಂಗಳೂರಿನಿಂದ ಬೆಳಗ್ಗೆ ಹೊರಟ ಗೃಹ ಸಚಿವರು, 12.30 ಕ್ಕೆ ಗ್ರಾಮಕ್ಕೆ ಬಂದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಶಾಸಕ ಅಬ್ಬಯ್ಯ ಪ್ರಸಾದ್ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಧ್ಯಮದವರನ್ನು ಹೊರಗಿಟ್ಟು ಕುಟುಂಬಸ್ಥರೊಂದಿಗೆ ಗೃಹಸಚಿವರ ಚರ್ಚೆ
ಮೃತ ಪಿಎಸ್‌ಐ ಪರಶುರಾಮ ಅವರ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮಾಧ್ಯಮದವರನ್ನು ಹೊರಗಿಟ್ಟು ಮೃತರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿದರು.
ಪರಶುರಾಮ ಅವರ ನಿವಾಸದಲ್ಲಿ ಗೌಪ್ಯವಾಗಿ ಕುಟುಂಬಸ್ಥರೊಂದಿಗೆ ಗೃಹ ಸಚಿವರು ಚರ್ಚೆ ನಡೆಸಿದರು. ಚರ್ಚೆ ವೇಳೆ ಮಾಧ್ಯಮದವರನ್ನು ನಿರ್ಬಂಧಿಸಿದ್ದಾರೆ. ನಿವಾಸದ ಮುಂಭಾಗದ ಕಾರ್ಯಕರ್ತರು ಹಾಗೂ ಮಾಧ್ಯಮದವರು ಕಾಯುತ್ತಿರುವ ಪ್ರಸಂಗ ನಡೆಯಿತು.