ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದೇ ಕೆಲಸ, ಅದೇ ಮನೆ ಬೋರಾಗಿದೆ ಸ್ನೇಹಿತರ ಜೊತೆ ಹೋಗಿ ಸ್ವಲ್ಪ ಎಂಜಾಯ್ ಮಾಡ್ಕೊಂಡು ಬರೋಣ ಎಂದು ವ್ಯಕ್ತಿಯೊಬ್ಬ ವಂಡರ್‌ಲಾಗೆ ಬಂದಿದ್ದು, ನಡೆಯಬಾರದ ದುರ್ಘಟನೆ ನಡೆದುಹೋಗಿದೆ.
ರಾಮನಗರ ತಾಲೂಕಿನ ಬಿಡದಿ ಬಳಿ ಇರುವ ವಂಡರ್‌ಲಾಗೆ ಸ್ನೇಹಿತರ ಜೊತೆ ಬಂದಿದ್ದ ರಾಜು(35) ಸಾಹಸ ಕ್ರೀಡೆ ಆಡುವಾಗ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ.
ವಂಡರ್‌ಲಾದಲ್ಲಿ ಆತಂಕ ಸೃಷ್ಟಿಯಾಗಿದ್ದು, ಕ್ರೀಡೆಗಳನ್ನು ಆಡಲು ಜನ ಭಯಪಡುತ್ತಿದ್ದಾರೆ. ಈ ಬಗ್ಗೆ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿದೆ.