ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಆಕಸ್ಮಿಕ ಅವಘಡ: ಅಂಕೋಲಾ ಮೂಲದ ನಾಗರಾಜ ಸಾವು

ಹೊಸ ದಿಗಂತ ವರದಿ, ಅಂಕೋಲಾ:

ತಾಲೂಕಿನ ಲಕ್ಷ್ಮೇಶ್ವರ ಮೂಲದ ನೌಕಾನೆಲೆ ಸಿಬ್ಬಂದಿ ನಾಗರಾಜ ಮುಕುಂದ ಕಳಸ (33) ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಆಕಸ್ಮಿಕ ಅವಘಡವೊಂದರಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಪಟ್ಟಣದ ಲಕ್ಷ್ಮೇಶ್ವರ ನಿವಾಸಿ ನಾಗರಾಜ ಕಳಸ್ 2010 ರಲ್ಲಿ ಕಾರವಾರ ನೌಕಾನೆಲೆಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ಮುಂಬೈನಲ್ಲಿ ಕೆಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು ಇತ್ತೀಚೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮುಂದಿನ ವರ್ಷ ಸೇವಾ ನಿವೃತ್ತಿ ಹೊಂದುವರಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳು, ತಂದೆ ತಾಯಿ ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.
ನಾಗರಾಜ ಕಳಸ ಅವರ ಮೃತ ದೇಹ ಅಂಡಮಾನ್ ನಿಕೋಬಾರ್ ನಿಂದ ಹೈದರಾಬಾದ್ ಗೋವಾ ಮಾರ್ಗವಾಗಿ ಅಂಕೋಲಾ ತಲುಪಲಿದ್ದು ಗುರುವಾರ ಬೆಳಗ್ಗೆ ಸಾರ್ವಜನಿಕ ದರ್ಶನದ ನಂತರ ಕೋಟೆವಾಡದ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ
ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!