ಹೊಸದಿಗಂತ ವರದಿ ಕೊಪ್ಪಳ:
ಬಿಜೆಪಿ ಅವಧಿಯಲ್ಲಿ 5900ಕೋಟಿ ರೂ. ಸಾಲ ಮಾಡಿ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ಆಡಳಿತದಲ್ಲಿ ಒಂದು ಬಸ್ ಸಹ ಖರೀದಿಸಿಲ್ಲ, ನೇಮಕಾತಿ ಮಾಡಿಲ್ಲ. ಸುಮ್ಮನೆ ಆರೋಪ ಮಾಡುತ್ತಾರೆ. ಆರೋಪ ಮಾಡುವ ಬಿಜೆಪಿಗರೇ ಆರೋಪಿಗಳು ಎಂದು ಸಚಿವ ರಾಮಲಿಂಗಾರಡ್ಡಿ ಹೇಳಿದರು.
ಕೊಪ್ಪಳ ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು. 2019ರಿಂದ 23ರವರೆಗೆ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮದಲ್ಲಿ ಒಂದು ಬಸ್ ಖರೀದಿಸಿಲ್ಲ. 2016-23ರವರೆಗೆ 16 ನೌಕರರು ನಿವೃತ್ತರಾಗಿದ್ದಾರೆ. ನಾವು ಅಧಿಕಾರಕ್ಕೆ ಬಂದ ನಂತರ 6300 ಬಸ್ ಖರೀದಿ ಪ್ರಕ್ರಿಯೆ ನಡೆದಿದ್ದು, 3400 ಬಸ್ ಗಳು ಬಂದಿದ್ದು, ಬಾಕಿ ಬಸ್ ಗಳು ಬರಲಿವೆ ಎಂದರು.