ಮಹಿಳಾ ವೈದ್ಯೆಯ ಖಾಸಗಿ ಚಿತ್ರ ಕ್ಲಿಕ್ಕಿಸಿದ ಆರೋಪ: ಸುಪ್ರೀಂಕೋರ್ಟ್ ನಲ್ಲಿ ಬಿಎಸ್​ಎಫ್​ ಯೋಧನಿಗೆ ಬಿಗ್​ ರಿಲೀಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಎಸ್​ಎಫ್​ ಯೋಧನಿಗೆ ಸುಪ್ರೀಂಕೋರ್ಟ್​ ಬಿಗ್​ ರಿಲೀಫ್​ ನೀಡಿದೆ.
ಮಹಿಳಾ ವೈದ್ಯೆಯ ಖಾಸಗಿ ಕ್ಷಣಗಳ ಚಿತ್ರಗಳನ್ನು ಕ್ಲಿಕ್ಕಿಸಿದ ಆರೋಪದ ಮೇಲೆ ವಜಾಗೊಂಡಿರುವ ಆರೋಪಗಳಿಗೆ ಬಲವಾದ ಯಾವುದೇ ಸಾಕ್ಷಿಗಳಿಲ್ಲ. ಅವರನ್ನು ವಜಾ ಮಾಡಿದ ಕ್ರಮ ಸರಿಯಲ್ಲ. ವಜಾಗೊಂಡ ದಿನದಿಂದ ಅವರ ಸಂಬಳದಲ್ಲಿ ಅರ್ಧದಷ್ಟನ್ನು ಪಾವತಿಸಬೇಕು ಎಂದು ಆದೇಶಿಸಿದೆ.

ಗಡಿ ಭದ್ರತಾ ಪಡೆಯ(ಬಿಎಸ್​ಎಫ್​) ಸಿಬ್ಬಂದಿಯಾದ ಜೋಗೇಶ್ವರ್​ ಸ್ವೈನ್​ ಮೇಲೆ 2005 ರಲ್ಲಿ ವೈದ್ಯೆಯೊಬ್ಬರು ಸ್ನಾನ ಮಾಡುತ್ತಿರುವ ವೇಳೆ ಚಿತ್ರಗಳನ್ನು ತೆಗೆದ ಆರೋಪ ಹೊರಿಸಲಾಗಿದೆ. ವಿಚಾರಣೆ ನಡೆಸಿದ ಸಮಗ್ರ ಭದ್ರತಾ ಪಡೆ ನ್ಯಾಯಾಲಯ(ಎಸ್​ಎಸ್​ಎಫ್​ಸಿ) ಜೋಗೇಶ್ವರ್ ಮೇಲೆ ಕೇಸ್​ ದಾಖಲಿಸಿ ಕೆಲಸದಿಂದ ವಜಾ ಮಾಡಿತ್ತು.

ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಾಗಲೂ ಆರೋಪಿಯ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಸಿಕ್ಕ ಕ್ಯಾಮೆರಾ ಆತನದ್ದೇ ಮತ್ತು ಅವರೇ ಚಿತ್ರಗಳನ್ನು ತೆಗೆದಿದ್ದಾರೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಆರೋಪಿಯ ವಿರುದ್ಧ ನಡೆದ ತನಿಖೆ ತಪ್ಪಾಗಿದೆ. ಕೆಲಸದಿಂದ ವಜಾ ಮಾಡಿದ್ದೂ ತಪ್ಪು. ಆತನಿಗಿದ್ದ ಸಂಬಳದಲ್ಲಿ ಅರ್ಧದಷ್ಟನ್ನು ವಜಾಗೊಂಡ ದಿನಗಳವರೆಗೆ ನೀಡಬೇಕು ಎಂದು ತೀರ್ಪು ನೀಡಿತ್ತು.

ಆದರೆ, ಇದರ ವಿರುದ್ಧ ಬಿಎಸ್​ಎಫ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ಕೋರ್ಟ್​, ದೆಹಲಿ ಕೋರ್ಟ್​ ನೀಡಿದ ಆದೇಶವನ್ನು ಎತ್ತಿಹಿಡಿದಿದೆ. ಚಿತ್ರ ತೆಗೆದಿದ್ದು ಆತನೇ, ಕ್ಯಾಮೆರಾ ಕೂಡ ಆತನದ್ದೇ ಎಂಬುದು ಪ್ರಕರಣದಲ್ಲಿ ಸಾಬೀತಾಗಿಲ್ಲ. ಹೀಗಾಗಿ ಕೆಲಸದಿಂದ ವಜಾಗೊಂಡ ಸಿಬ್ಬಂದಿ ಪರಿಹಾರಕ್ಕೆ ಅರ್ಹರು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!