ನಾಯಕರ ಘೋಷಣೆಗೆ ಜಿ20 ಶೃಂಗಸಭೆಯಲ್ಲಿ ಸಿಕ್ಕಿತು ಒಮ್ಮತ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿ20 ನಾಯಕರ ಶೃಂಗಸಭೆಯಲ್ಲಿ ನಾಯಕರ ಘೋಷಣೆಗೆ ಒಮ್ಮತವನ್ನು ಸ್ವೀಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದ್ದಾರೆ.

ಎಲ್ಲಾ ತಂಡಗಳ ಕಠಿಣ ಪರಿಶ್ರಮದಿಂದ ನಾವು ಜಿ20 ನಾಯಕರ ಶೃಂಗಸಭೆಯ (G20 Summit) ಘೋಷಣೆಯ ಬಗ್ಗೆ ಒಮ್ಮತವನ್ನು ಪಡೆದಿದ್ದೇವೆ. ಈ ಘೋಷಣೆಯನ್ನು ಅಳವಡಿಸಿಕೊಳ್ಳುವುದಾಗಿ ಘೋಷಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಮ್ಮ ತಂಡದ ಕಠಿಣ ಪರಿಶ್ರಮದಿಂದಾಗಿ ನನಗೆ ಒಳ್ಳೆಯ ಸುದ್ದಿ ಸಿಕ್ಕಿದೆ.ದೆಹಲಿ ಜಿ 20 ನಾಯಕರ ಶೃಂಗಸಭೆ ಘೋಷಣೆಯ ಬಗ್ಗೆ ಒಮ್ಮತ ವ್ಯಕ್ತವಾಗಿದೆ. ಈ ನಾಯಕತ್ವದ ಘೋಷಣೆಯನ್ನು ಅಳವಡಿಸಿಕೊಳ್ಳುವುದು ನನ್ನ ಪ್ರಸ್ತಾಪವಾಗಿದೆ. ನಾನು ಈ ಘೋಷಣೆಯನ್ನು ಅಳವಡಿಸಿಕೊಳ್ಳಿಸುವುದಾಗಿ ಘೋಷಿಸುತ್ತೇನೆ. ಈ ಸಂದರ್ಭದಲ್ಲಿ, ನಾನು ಅದಕ್ಕಾಗಿ ಶ್ರಮಿಸಿದ ಮತ್ತು ಅದನ್ನು ಸಾಧ್ಯವಾಗಿಸಿದ ನನ್ನ ಶೆರ್ಪಾ, ಸಚಿವರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಅಮಿತಾಬ್ ಕಾಂತ್ ಟ್ವೀಟ್ ಮಾಡಿದ್ದೂ, ದೆಹಲಿಯ ನಾಯಕರ ಘೋಷಣೆಯು “ಬಲವಾದ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ, ಎಸ್ ಡಿಜಿ ಗಳ (ಸುಸ್ಥಿರ ಅಭಿವೃದ್ಧಿ ಗುರಿ) ಪ್ರಗತಿಯನ್ನು ವೇಗಗೊಳಿಸುವುದು, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದಸ 21 ನೇ ಶತಮಾನದಲ್ಲಿ ಬಹುಪಕ್ಷೀಯ ಸಂಸ್ಥೆಗಳು ಮತ್ತು ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸುವುದು ಮೊದಲಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿಯವರ ಕಚೇರಿ, ನರೇಂದ್ರ ಮೋದಿಯರ ಅವರ ಮಾನವ ಕೇಂದ್ರಿತ ಜಾಗತೀಕರಣ ಮತ್ತು ಗ್ಲೋಬಲ್ ಸೌತ್ ಬಗ್ಗೆ ನಮ್ಮ ಕಾಳಜಿಗಳು ಅನುರಣನ ಮತ್ತು ಮನ್ನಣೆಯನ್ನು ಕಂಡುಕೊಂಡಿವೆ. ಅವರ ಸಹಕಾರ ಮತ್ತು ಬೆಂಬಲಕ್ಕಾಗಿ ಎಲ್ಲಾ G20 ಸದಸ್ಯರಿಗೆ ಧನ್ಯವಾದಗಳು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!