ಹೊಸದಿಗಂತ ವರದಿ,ವಿಜಯಪುರ:
ಆಸ್ಪತ್ರೆ ಸಿಬ್ಬಂದಿ ಮದ್ಯದ ನಶೆಯಲ್ಲಿ ಡಯಾಲಿಸಿಸ್ ಮಾಡಿ, ಮಹಿಳೆ ಸಾವಿಗೆ ಕಾರಣವಾಗಿದ್ದಾನೆ ಎಂದು ಆರೋಪಿಸಿ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು, ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಇಲ್ಲಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಸವರಾಜ ಎಂಬವನು ಮದ್ಯದ ನಶೆಯಲ್ಲಿ,
ಬಿಸ್ಮಿಲ್ಲಾ ನದಾಫ್ ಎಂಬ ಮಹಿಳೆಗೆ ಡಯಾಲಿಸಿಸ್ ಮಾಡಿ ಪ್ರಾಣ ತೆಗೆದಿದ್ದಾನೆ ಎಂದು ನದಾಫ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಡಯಾಲಿಸಿಸ್ ವೇಳೆ ಆಸ್ಪತ್ರೆ ಬೆಡ್ ಮೇಲೆಯೇ ರೋಗಿ ಮೃತಪಟ್ಟಿದ್ದು, ಆಸ್ಪತ್ರೆ ಎದುರು ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.