Friday, October 7, 2022

Latest Posts

ನೆಹರುರನ್ನು ಕಡೆಗಣಿಸಿದ ಆರೋಪ: ಬಿಜೆಪಿಗೆ ಸೋನಿಯಾ ಗಾಂಧಿ ತರಾಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕರ್ನಾಟಕ ಬಿಜೆಪಿಯು ತನ್ನ ಹರ್ ಘರ್ ತಿರಂಗ ಜಾಹೀರಾತಿನಿಂದ ನೆಹರೂ ಅವರನ್ನು ಕೈಬಿಟ್ಟಿದೆಯೆಂದು ಕಾಂಗ್ರೆಸ್‌ ಆರೋಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಭಾಷಣದಲ್ಲಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. “ಕಳೆದ 75 ವರ್ಷಗಳಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ.ಆದರೆ ಇಂದಿನ ನಾರ್ಸಿಸಿಸ್ಟಿಕ್ (ಸ್ವಾರ್ಥಿ) ಸರ್ಕಾರವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ತ್ಯಾಗ ಮತ್ತು ದೇಶದ ಅದ್ಭುತ ಸಾಧನೆಗಳನ್ನು ಕಡೆಗಣಿಸುತ್ತಿದೆ. ಇದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.

“ರಾಜಕೀಯ ಲಾಭಕ್ಕಾಗಿ ಐತಿಹಾಸಿಕ ಸತ್ಯಗಳ ಯಾವುದೇ ತಪ್ಪು ಚಿತ್ರಣವನ್ನು ಕಾಂಗ್ರೆಸ್ ಒಪ್ಪಿಕೊಳ್ಳುವುದಿಲ್ಲ ಅಥವಾ ಸುಳ್ಳಿನ ಆಧಾರದ ಮೇಲೆ ಗಾಂಧಿ-ನೆಹರು-ಪಟೇಲ್-ಆಜಾದ್ ಅವರನ್ನು ಅವಮಾನಿಸಲು ಅವಕಾಶ ನೀಡುವುದಿಲ್ಲ” ಎಂದು ಸೋನಿಯಾ ಗಾಂಧಿ ಗುಡುಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!