ಪ್ರೀಮಿಯರ್​ ಶೋ ನಲ್ಲಿ ‘ಆಚಾರ್​ ಆ್ಯಂಡ್​ ಕೋ’ ಗೆ ಉತ್ತಮ ರೆಸ್ಪಾನ್ಸ್ : ಸಿಂಧೂ ಶ್ರೀನಿವಾಸಮೂರ್ತಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜುಲೈ 28ರಂದು ಬಿಡುಗಡೆಯಾಗಲಿರುವ ‘ಆಚಾರ್​ ಆ್ಯಂಡ್​ ಕೋ’ ಸಿನಿಮಾದ ಪ್ರೀಮಿಯರ್​ ಶೋ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಸಿನಿಮಾ ವೀಕ್ಷಿಸಿದ ಬಳಿಕ ಜನರಿಂದ ಸಿಕ್ಕ ರೆಸ್ಪಾನ್ಸ್​ ನೋಡಿ ನಿರ್ದೇಶಕಿ ಸಿಂಧೂ ಶ್ರೀನಿವಾಸಮೂರ್ತಿ ಖುಷಿ ಆಗಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ.

‘ಪಿಆರ್​ಕೆ ಪ್ರೊಡಕ್ಷನ್ಸ್​’ ಮೂಲಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾವನ್ನು ಎಲ್ಲರೂ ಚೆನ್ನಾಗಿದೆ ಅಂತಿದ್ದಾರೆ. ಜುಲೈ 28ರಂದು ಬಿಡುಗಡೆಯಾಗಲಿರುವ ಸಿನಿಮಾವನ್ನು ಚಿತ್ರಮಂದಿರಕ್ಕೆ ನೀವು ಕೂಡ ಕುಟುಂಬ ಸಮೇತರಾಗಿ ಹೋಗಿ ನೋಡಿ ಎಂದು ಸಿಂಧೂ ಶ್ರೀನಿವಾಸಮೂರ್ತಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!