ಸೂಪರ್​ಸ್ಟಾರ್ ಚಿರಂಜೀವಿ ಅಭಿನಯದ ‘ಭೋಲಾ ಶಂಕರ್’ ಟ್ರೇಲರ್ ಅನಾವರಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಭೋಲಾ ಶಂಕರ್’. ಇದೊಂದು ಫ್ಯಾಮಿಲಿ ಎಂಟರ್​ಟೈನ್​ಮೆಂಟ್​​ ಸಿನಿಮಾ ಆಗಿದ್ದು, ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೆಹರ್ ರಮೇಶ್ ಆಯಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಮತ್ತು ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬರಲು ಸಜ್ಜಾಗಿದೆ. ಗುರುವಾರ ಸಿನಿಮಾದ ಟ್ರೇಲರ್ ಅನ್ನು ಚಿರಂಜೀವಿ ಪುತ್ರ, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅನಾವರಣಗೊಳಿಸಿದ್ದಾರೆ. ಚಿರಂಜೀವಿ ಪಂಚಿಂಗ್​ ಡೈಲಾಗ್ಸ್​, ಎಕ್ಸ್‌ಪ್ರೆಶನ್ಸ್​​ ಸಿನಿಪ್ರೇಮಿಗಳನ್ನು ಆಕರ್ಷಿಸುತ್ತಿದೆ.

ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮೆಗಾಸ್ಟಾರ್​ ಚಿರಂಜೀವಿ ಸದ್ಯ ‘ಭೋಲಾ ಶಂಕರ್’ ಸಲುವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಮೆಚ್ಚಿನ ನಟನ ಸಿನಿಮಾ ಬಗ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ಬಹುಬೇಡಿಕೆ ನಟಿ ಕೀರ್ತಿ ಸುರೇಶ್ ಅವರು ನಟ ಚಿರಂಜೀವಿ ಅವರ ಸಹೋದರಿಯಾಗಿ ಅಭಿನಯಿಸಿದ್ದಾರೆ. ಮಾಸ್ ಆಯಕ್ಷನ್ ಸಿನಿಮಾ ಕಂಪ್ಲೀಟ್​ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಆಗಿರಲಿದೆ. ನಿರ್ದೇಶಕ ಮೆಹರ್ ರಮೇಶ್ ಈ ಚಿತ್ರವನ್ನು ವಿಭಿನ್ನವಾಗಿ ನಿರ್ದೇಶಿಸಿದ್ದಾರೆ. ‘ಭೋಲಾ ಶಂಕರ್’ ಚಿತ್ರದಲ್ಲಿ ನಟ ಚಿರಂಜೀವಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!